HDK ಮತ್ತು ಸಿದ್ದರಾಮಯ್ಯ ಪ್ರತಿಷ್ಟೆಯೇ ಬಜೆಟ್ ಗೊಂದಲಕ್ಕೆ ಕಾರಣ : ಆಯನೂರು ಮಂಜುನಾಥ್

ಶಿವಮೊಗ್ಗದಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ. ‘ ವಿಧಾನ ಮಂಡಲ ಅಧಿವೇಶನ 2 ರಿಂದ ಪ್ರಾರಂಭವಾಗಲಿದೆ. ಅಧಿವೇಶನದ ಬಗ್ಗೆ ಎಲ್ಲಾ ಶಾಸಕರಿಗೆ ನೋಟಿಸ್ ಬರುತ್ತದೆ. ಆದರೆ, ಈ ಬಾರಿ ಕಲಾಪದ ಬಗ್ಗೆ ಯಾವುದೇ ವೇಳಾಪಟ್ಟಿ, ಪ್ರಶ್ನೋತ್ತರ ಬಗ್ಗೆ ಮಾಹಿತಿಯೇ ಬಂದಿಲ್ಲ. ಸರ್ಕಾರಕ್ಕೆ ಪ್ರಶ್ನೆಗಳನ್ನು ಕಳುಹಿಸಲು ಅವಕಾಶ ಇಲ್ಲದಂತಾಗಿದೆ ‘ ಎಂದಿದ್ದಾರೆ.

ಹೊಸ ಸರ್ಕಾರದಲ್ಲಿ ಎಲ್ಲಾ ಶಾಸಕರ ಹಕ್ಕನ್ನು ಮೊಟುಕುಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ‘ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯರ ಪ್ರತಿಷ್ಟೆಯ ಪ್ರಶ್ನೆಯಿಂದಾಗಿ ಹೀಗಾಗುತ್ತಿದೆ. ಬಜೆಟ್ ಮಂಡನೆ ಮಾಡುತ್ತೀನೋ ಇಲ್ಲವೋ ಎಂಬ ಸಂಶಯ ಕುಮಾರಸ್ವಾಮಿ ಅವರಿಗಿದೆ. ಅಧಿವೇಶನದಲ್ಲಿ ಜನರ ಸಮಸ್ಯೆಗಳ ಚರ್ಚೆಗೆ ಅವಕಾಶ ಬೇಕಿದೆ‌. ಅಧಿವೇಶನ 15 ದಿನಗಳ ಕಾಲ ವಿಸ್ತರಿಸಿ ‘ ಎಂದು ಆಯನೂರು ಮಂಜುನಾಥ್ ಒತ್ತಾಯ ಪಡಿಸಿದ್ದಾರೆ.

Leave a Reply

Your email address will not be published.