FIFA 2018 : ಹಾಲಿ ಚಾಂಪಿಯನ್ನರಿಗೆ ಕೊರಿಯಾ ಶಾಕ್ : ಟೂರ್ನಿಯಿಂದ ಹೊರಬಿದ್ದ ಜರ್ಮನಿ

ಕಜಾನ್ ಅರೆನಾದಲ್ಲಿ ಬುಧವಾರ ನಡೆದ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಆಘಾತ ಎದುರಿಸಿದೆ. ಜರ್ಮನಿ ವಿರುದ್ಧ ವಿರುದ್ಧ ದಕ್ಷಿಣ ಕೋರಿಯಾ 2-0 ಗೋಲುಗಳ ಅಂತರದಿಂದ ಜಯಗಳಿಸಿದ್ದು, 2014ರಲ್ಲಿ ಬ್ರೆಜಿಲ್ ನಲ್ಲಿ ವಿಶ್ವಕಪ್ ಟ್ರೋಫಿ ಜಯಿಸಿದ್ದ ಜರ್ಮನಿ ಈ ಬಾರಿ ಗ್ರೂಪ್ ಹಂತದಿಂದಲೇ ನಿರ್ಗಮಿಸಿದೆ.

ಎಕ್ಟೆರಿನ್ ಬರ್ಗ್ ಅರೆನಾದಲ್ಲಿ ನಡೆದ ‘ಎಫ್’ ಗುಂಪಿನ ಲೀಗ್ ಪಂದ್ಯದಲ್ಲಿ ಮೆಕ್ಸಿಕೊ ವಿರುದ್ಧ ಸ್ವೀಡನ್ 3-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ‘ಎಫ್’ ಗುಂಪಿನಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಮೆಕ್ಸಿಕೊ ಹಾಗೂ ಸ್ವೀಡನ್ ತಂಡಗಳು ಪ್ರೀ ಕ್ವಾರ್ಟರ್ ಹಂತವನ್ನು ಪ್ರವೇಶಿಸಲು ಅರ್ಹತೆ ಪಡೆದಿವೆ.

ಸ್ಪಾರ್ಟಕ್ ಕ್ರೀಡಾಂಗಣದಲ್ಲಿ ನಡೆದ ‘ಇ’ ಗುಂಪಿನ ಲೀಗ್ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಬ್ರೆಜಿಲ್ 0-2 ಗೋಲ್ ಅಂತರದ ಗೆಲುವು ಸಾಧಿಸಿದೆ. ಬ್ರೆಜಿಲ್ ಪರವಾಗಿ ಪಾಲಿನ್ಹೊ (36″) ಥಿಯಾಗೊ ಸಿಲ್ವಾ (68″) ಗೋಲ್ ದಾಖಲಿಸಿದರು.

ನಿಝ್ನಿ ನೊವ್ಗೊರೊಡ್ ಕ್ರೀಡಾಂಗಣದಲ್ಲಿ ಸ್ವಿಟ್ಜರ್ಲೆಂಡ್ ಹಾಗೂ ಕೋಸ್ಟರಿಕಾ ತಂಡಗಳ ನಡುವೆ ನಡೆದ ‘ಇ’ ಗುಂಪಿನ ಲೀಗ್ ಪಂದ್ಯ 2-2 ಡ್ರಾನಲ್ಲಿ ಅಂತ್ಯಗೊಂಡಿದೆ.

 

Leave a Reply

Your email address will not be published.

Social Media Auto Publish Powered By : XYZScripts.com