ಕಲ್ಮಠ ಸ್ವಾಮಿಯ ರಾಸಲೀಲೆ ಫೋಟೊಗಳು ವೈರಲ್ : ಮಠದಿಂದ ತೊಲಗಿಸಲು ಶಾಸಕರಿಗೆ ಗಡುವು

ಕೊಪ್ಪಳ : ಸಾಮಾಜಿಕ ತಾಣಗಳಲ್ಲಿ ಗಂಗಾವತಿಯ ಪ್ರತಿಷ್ಠಿತ ಕಲ್ಮಠದ ಕೊಟ್ಟೂರು ಸ್ವಾಮಿಯ ರಾಸಲೀಲೆಯ ಹಳೆಯ ಪೋಟೊಗಳು ಮತ್ತೊಮ್ಮೆ ವೈರಲ್ ಆಗಿವೆ. ಕಲ್ಮಠ ಸ್ವಾಮಿಯ ವಿರುದ್ದ ನಡೆಯುತ್ತಿದ್ದ ಹೋರಾಟವನ್ನು ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿತ್ತು.

ಈಗ ಶಾಸಕರಾಗಿ ಆಯ್ಕೆಯಾಗಿರುವ ಪರಣ್ಣ ಮುನವಳ್ಳಿ ಸ್ವಾಮಿಯನ್ನು ಮಠದಿಂದ ತೆಗದು ಹಾಕುವ ಭರವಸೆ ನೀಡಿದ್ದರು. ಭರವಸೆ ಈಡೇರದ ಹಿನ್ನೆಲೆ ಸಾಮಾಜಿಕ ತಾಣಗಳಲ್ಲಿ ಶಾಸಕರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಮುಂದಿನ ತಿಂಗಳ 20ರವರೆಗೆ ಹೋರಾಟಗಾರರು ಗಡುವು ನೀಡಿದ್ದಾರೆ. ಅನೈತಿಕ ಸಂಬಂದ ಇದೆ ಎಂದು ಆರೋಪಿಸಿದ್ದ ಮಹಿಳೆಗೆ ಇತ್ತೀಚಿಗೆ ಸ್ವಾಮಿ ಬಂಗಾರ ನೀಡಿದ್ದಾರೆ ಎನ್ನಲಾಗಿದ್ದು ಅದರ ಪೋಟೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com