ಮಂಗಳೂರು : ಪ್ರಕೃತಿ ಚಿಕಿತ್ಸಾಲಯದಿಂದ ಇಂದು ಮಾಜಿ ಸಿಎಂ ಡಿಸ್ಚಾರ್ಜ್

ಮಂಗಳೂರು : ಪ್ರಕೃತಿ ಚಿಕಿತ್ಸಾಲಯದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಡಿಸ್ಚಾರ್ಜ್ ಆಗಲಿದ್ದಾರೆ. ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು ನಂತರ, ಸಿದ್ದರಾಮಯ್ಯನವರು ಮಂಗಳೂರಿಗೆ ತೆರಳಲಿದ್ದಾರೆ.

ಮಂಗಳೂರಿನಲ್ಲಿ ಕುರುಬ ಸಂಘದವರ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಆನಂತರ ಎರಡು ಖಾಸಗಿ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ನಂತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ.

ಬೆಳಗ್ಗೆ ಯೋಗ, ದ್ಯಾನ, ಪ್ರಾಣಯಾಮ ಮತ್ತು ರೊಟಿನ್ ಮಡ್ ಪ್ಯಾಕ್ ಮಾಡಲಾಗವುದು, ನಂತರ ವೈದ್ಯ ಪ್ರಶಾಂತ್ ಶೆಟ್ಟಿ ಎಂಡ್ ಕೌನ್ಸಿಲಿಂಗ್ ಮಾಡುಲಿದ್ದಾರೆ.
ಪ್ರತಿನಿತ್ಯ ಯಾವ ಯಾವ ಯೋಗ ಮಾಡಬೇಕು, ಧ್ಯಾನ, ಪ್ರಾಣಾಯಾಮ ಯಾವ ವೇಳೆಯಲ್ಲಿ ಮಾಡಬೇಕು. ಆರಂಭಿಕ ಹಂತದಲ್ಲಿ ಆಹಾರ ಕ್ರಮ ಎಂಬುದರ ಬಗ್ಗೆ ಸಿದ್ದುಗೆ ವೈದ್ಯ ಡಾ. ಪ್ರಶಾಂತ್ ಶೆಟ್ಟಿ ತಿಳುವಳಿಕೆ ನೀಡಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com