ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ಎಂ.ಬಿ ಪಾಟೀಲ್ ಮನೆ ಮುಂದೆ ವಾಮಾಚಾರ..?

ಹುಬ್ಬಳ್ಳಿ : ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಎಂ ಬಿ ಪಾಟೀಲ್ ಮನೆ ಮುಂದೆ ವಾಮಾಚಾರ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಅಧ್ಯಕ್ಷರಾದ ಎಮ್ ಬಿ ಪಾಟೀಲ್ ಅವರ ಮಗ ತಮ್ಮನಗೌಡರ ಮೇಲಿನ ದ್ವೇಷಕ್ಕೆ ವಾಮಾಚಾರ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

ತಮ್ಮನಗೌಡರ ಗೆಳೆಯರ ಬಳಗ ಸಂಘ ಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿನ ದ್ವೇಷದಿಂದ ವಾಮಾಚಾರ ಮಾಡಿರೋ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಶಾಸಕ ಸಿ ಎಸ್ ಶಿವಳ್ಳಿ ಗೆಲುವಿಗೆ ಎಂ.ಬಿ ಪಾಟೀಲ್ ಶ್ರಮಿಸಿದ್ದರು. ಹಾಗಾಗಿ ಅವರ ಮನೆ ಮುಂದೆ ವಾಮಾಚಾರ ಮಾಡಿರೋ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com