ಮೈಸೂರು : BSNL ನಾನ್ ಪರ್ಮನೆಂಟ್ ನೌಕರರ ಸಂಘದಿಂದ ಪ್ರತಿಭಟನೆ

ಮೈಸೂರು : ಕರ್ನಾಟಕ ರಾಜ್ಯ ಬಿ ಎಸ್ ಎನ್ ಎಲ್ ನಾನ್ ಪರ್ಮನೆಂಟ್ ನೌಕರರ ಸಂಘದ ವತಿಯಿಂದ ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ತೆಗೆದು ಹಾಕಿರುವ ಕಾರ್ಮಿಕರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು..

ನಗರದ ಜಯಲಕ್ಷ್ಮಿ ಪುರಂ ನಲ್ಲಿರುವ bsnl ಕಛೇರಿ ಎದುರು ನಡೆದ ಪ್ರತಿಭಟನೆ ಯಲ್ಲಿ ಸಂಘದ ಅಧ್ಯಕ್ಷ ಶಬರೀಶ್ ಕುಮಾರ್ ರವರು ಮಾತನಾಡಿ ‘ ಮೈಸೂರು ಜಿಲ್ಲೆಯಲ್ಲಿ ಸುಮಾರು 60 ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ವಜಾಗೊಳಿಸಲಾಗಿದ್ದು ಇದರ ವಿಚಾರವಾಗಿ ಕಾನೂನು ಹೊರಟ ನಡೆಸಿದ್ದೇವು ಅದರಲ್ಲಿ ಜಯ ಸಾದಿಸಿದ್ದು ಆ ತೀರ್ಪೀಗು ಬೆಲೆ ಕೊಡದೆ ವಜಾಗೊಳಿಸಿರುವ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ.

‘ ಆದ್ದರಿಂದ ರಿಂದ ಮರು ನೇಮಕ ಮಾಡಿಕೊಂಡು , 5 ನೇ ತಾರಿಖೀನ ಒಳಗೆ ವೇತನ ಪಾವತಿಯಾಗಬೇಕು , ನ್ಯಾಯಾಲಯದ ಆದೇಶದಂತೆ ಎಲ್ಲಾ ಕಾರ್ಮಿಕರಿಗೂ ಬೋನಸ್ ನೀಡಬೇಕು, ಕಾರ್ಮಿಕ ಕಾನೂನುಗಳು ಕಡ್ಡಾಯವಾಗಿ ಜಾರಿ ಆಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶ್ರೀನಿವಾಸ್ , ರಾಮಲಿಂಗು ಸೇರಿದಂತೆ ಹಲವು ಕಾರ್ಮಿಕರು ಉಪಸ್ಥಿತರಿದ್ದರು.

One thought on “ಮೈಸೂರು : BSNL ನಾನ್ ಪರ್ಮನೆಂಟ್ ನೌಕರರ ಸಂಘದಿಂದ ಪ್ರತಿಭಟನೆ

Leave a Reply

Your email address will not be published.