ಹಾಸನ : ಬೇಟೆಗಾರನ ಉರುಳಿಗೆ ಸಿಲುಕಿ ಗಂಡು ಚಿರತೆಯ ಸಾವು..

ಹಾಸನ : ಬೇಟೆಗಾರರ ಒಡ್ಡಿದ್ದ  ಉರುಳಿಗೆ  ಸಿಲುಕಿಕೊಂಡ 4ವರ್ಷದ ಗಂಡು ಚಿರತೆ ಮೃತಪಟ್ಟಿರುವ ಘಟನೆ ಹಾಸನದ ಸಕಲೇಶಪುರ ತಾಲ್ಲೂಕಿನ ದೇವಲಕೆರೆಯ ಅಚ್ಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಸ್ತೆ ಬದಿಯಿಂದ ದೂರದಲ್ಲಿ ಒಡ್ಡಿದ್ದ ಉರುಳಿಗೆ ಸಿಲುಕಿ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದನ್ನು ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದ ತೋಟದ ಕಾರ್ಮಿಕರು ನೋಡಿ ಭಯದಿಂದ ಕೂಡಲೇ, ಸ್ಥಳೀಯರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಚಿರತೆ ಒದ್ದಾಡುತ್ತಿದ್ದ ಕಾರಣ ಉರುಳು ಬಿಗಿಯಾಗುತ್ತಿತ್ತು. ವಲಯ ಅರಣ್ಯ ಅಧಿಕಾರಿ ಮೋಹನ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಮೃತಪಟ್ಟಿತು ಎಂದು ತಿಳಿದುಬಂದಿದೆ.

ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಅವರ ಸಮ್ಮುಖದಲ್ಲಿ  ಅಂತಿಮ ಸಂಸ್ಕಾರ ಮಾಡಲಾಯಿತು. ಈ ಪ್ರಕರಣ ವಲಯ ಅರಣ್ಯ ಕಚೇರಿಯಲ್ಲಿ  ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com