ದೇವಸ್ಥಾನಕ್ಕೆ ಹೋದವ್ರು ದೇವಮಾನವರಾದ್ರು : ಪರಮೇಶ್ವರ್‌ರನ್ನೇ ಭಗವಂತನೆಂದು ಕಾಲಿಗೆರಗಿದ ಮಹಿಳಾ ಮಣಿಯರು

ತುಮಕೂರು : ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹರಕೆ ತೀರಿಸಲು ಬಂದಿದ್ದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್‌ ದೇವಾಲಯದಲ್ಲಿ ತಾವೇ ದೇವಮಾನವರಾದ ಸಂಗತಿ ನಡೆದಿದೆ.

ತುಮಕೂರಿನಲ್ಲಿ ಪರಮೇಶ್ವರ್ ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ಬಂದಿದ್ದರು. ಪರಮೇಶ್ವರ್‌ ಬರುತ್ತಿದ್ದಂತೆ ಅವರಿಗ ಹಾರ ತುರಾಯಿಗಳನ್ನು ಹಾಕಿ ದೇವಾಲಯದ ಒಳಗೆ ಬರಮಾಡಿಕೊಂಡಿದ್ದರು. ಬಳಿಕ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಅಲ್ಲಿ ನರೆದಿದ್ದ ಮಹಿಳಾ ಭಕ್ತಾದಿಗಳು ದೇವರಿಗೆ ಕೈ ಮುಗಿಯುವುದನ್ನು ಬಿಟ್ಟು ಪರಮೇಶ್ವರ್‌ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಕಾಲಿಗೆ ಬೀಳುತ್ತಿದ್ದರೂ ಅದನ್ನು ನಿರಾಕರಿಸದ ಪರಮೇಶ್ವರ್‌ ಎಲ್ಲರಿಗೂ ಕೈ ಮುಗಿದು ಮುಂದೆ ಸಾಗಿದ್ದಾರೆ. ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.

ಇನ್ನು ಈ ಘಟನೆಗೆ ಪ್ರಗತಿಪರರು, ಸಮಾಜವಾದಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com