Cricket : ಭಾರತ vs ಐರ್ಲೆಂಡ್ : ಡಬ್ಲಿನ್ ಅಂಗಳದಲ್ಲಿಂದು ಮೊದಲ T-20 ಪಂದ್ಯ

ಡಬ್ಲಿನ್ ನಲ್ಲಿ ಬುಧವಾರ ಭಾರತ ಹಾಗೂ ಐರ್ಲೆಂಡ್ ತಂಡಗಳ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಐರ್ಲೆಂಡ್ & ಇಂಗ್ಲೆಂಡ್ ಸುದೀರ್ಘ ಪ್ರವಾಸವನ್ನು ಗೆಲುವಿನೊಂದಿಗೆ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ. ಪಂದ್ಯ ಭಾರತೀಯ ಕಾಲಮಾನದಂತೆ ರಾತ್ರಿ 8.30ಕ್ಕೆ ಪ್ರಾರಂಭವಾಗಲಿದೆ.

ಎಡಗೈ ಬ್ಯಾಟ್ಸಮನ್ ಶಿಖರ್ ಧವನ್ ಹಾಗೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆರಂಭಿಕ ಆಟಗಾರರಾಗಿ ಕಣಕ್ಕಿಳಿಯಲಿದ್ದಾರೆ. ವಿರಾಟ್ ಕೊಹ್ಲಿ, ಸುರೇಶ್ ರೈನಾ, ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್ ಬಲವಾಗಿದ್ದಾರೆ. ಯಜುವೇಂದ್ರ ಸಿಂಗ್ ಚಹಲ್ ಹಾಗೂ ಕುಲದೀಪ್ ಯಾದವ್ ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಟ್ಟಿಹಾಕಲು ಯತ್ನಿಸಲಿದ್ದಾರೆ.

ಐರ್ಲೆಂಡ್ ವಿರುದ್ಧ ಭಾರತ ಒಟ್ಟು 2 ಟಿ-20 ಪಂದ್ಯಗಳನ್ನಾಡಲಿದ್ದು, 2ನೇ ಪಂದ್ಯ ಜೂನ್ 29ರಂದು ಶುಕ್ರವಾರ ನಡೆಯಲಿದೆ. ಆ ಬಳಿಕ ಇಂಗ್ಲೆಂಡ್ ವಿರುದ್ಧ 3 ಟಿ-20, 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳನ್ನಾಡಲಿದೆ.

 

Leave a Reply

Your email address will not be published.