ಗುವಾಹಟಿ ಏರ್‌ಪೋರ್ಟ್‌ನಲ್ಲೊಂದು ಅಮಾನವೀಯ ಘಟನೆ : ಗರ್ಭಿಣಿಯನ್ನು ನಗ್ನಗೊಳಿಸಿ ತಪಾಸಣೆ

ಗುವಾಹಟಿ : ಮಹಿಳೆಯರಿಗೆ ಹೆಚ್ಚಿನ ಗೌರವ ನೀಡುವ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಗರ್ಭಿಣಿ ಜೊತೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದು, ಭದ್ರತೆಯ ನೆಪದಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಪರೀಕ್ಷೆ ಮಾಡಿದ್ದಾರೆ. ತಂದೆಯ ಅಂತ್ಯಕ್ರಿಯೆಗಾಗಿ ಗರ್ಭಿಣಿಯಾಗಿದ್ದ ಡೋಲಿ ಗೋಸ್ವಾಮಿ ತನ್ನ ಪತಿ ಶಿವನ್‌ ಶರ್ಮಾ ಜೊತೆ ಅಸ್ಸಾಂಗೆ ಬಂದಿದ್ದರು. ಕಾರ್ಯಗಳೆಲ್ಲವನ್ನು ಮುಗಿಸಿಕೊಂಡು ದೆಹಲಿಗೆ ವಾಪಸ್ಸಾಗುವ ವೇಳೆ ಈ ಘಟನೆ ನಡೆದಿದೆ.

ಬೋರ್ಡಿಂಗ್​ ಪಾಸ್ ನೀಡುವಾಗ ಗರ್ಭಿಣಿಯಾಗಿರುವ ಬಗ್ಗೆ ದಾಖಲೆ ಕೊಡುವಂತೆ ಏರ್​ಪೋರ್ಟ್​ ಸಿಬ್ಬಂದಿ ಕೇಳಿದ್ದಾರೆ. ದಾಖಲೆ ಇಲ್ಲದ ಕಾರಣ ಅನುಮಾನಗೊಂಡ ಸಿಐಎಸ್ಎಫ್ ಮಹಿಳಾ ಎಸ್ಐ ಸುಜಾತ, ಆಕೆಯನ್ನು ನಗ್ನಗೊಳಿಸಿ ಪರೀಕ್ಷೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಡೋಲಿ ಪತಿ ಶಿವನ್‌, ಮಾವನ ಅಂತ್ಯಕ್ರಿಯೆಗಾಗಿ ದೆಹಲಿಯಿಂದ ಗುವಾಹಟಿಗೆ ತೆರಳಿದ್ದೆವು. ಜೂನ್ 12 ರಂದು ವಾಪಸ್​ ಬರುವಾಗ ಈ ರೀತಿ ಆಗಿತ್ತು.  ಭದ್ರತಾ ಕಾಳಜಿ ಬಗ್ಗೆ ನಮಗೂ ಅರಿವಿದೆ. ಆದ ರೆ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎಸ್​ಐ ಇನ್ನೂ ತರಬೇತಿ ಪಡೆಯುತ್ತಿದ್ದಾರೆ. ಗೊಂದಲದಿಂದಾಗಿ ಹೀಗಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published.