ಅರ್ಮಾನ್‌, ವಿ.ಪಿ ಮಾದಕ ಧ್ವನಿಗೆ ಮರುಳಾದ ಮೈಸೂರು : ಅರ್ಜುನ್ಯ ಜನ್ಯ ಸಂಗೀತ ಸಂಜೆಗೆ ಮನಸೋತ ಕಲಾರಸಿಕರು

ಮೈಸೂರು : ಕನ್ನಡ ದೃಶ್ಯ ಮಾಧ್ಯಮದಲ್ಲಿ ಮನರಂಜನೆಗೆ ಮತ್ತೊಂದು  ಹೆಸರೇ ಜೀ ಕನ್ನಡ ವಾಹಿನಿ.  ಈ ವಾಹಿನಿ ಈಗಾಗಲೇ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಕರ್ನಾಟಕದ ಮನೆ ಮನಗಳಲ್ಲಿ  ಚಿರಸ್ಥಾಯಿಯಾಗಿದೆ. ಇದೇ ನಿಟ್ಟಿನಲ್ಲಿ  ವೀಕ್ಷಕ ಪ್ರಭುವಿಗೆ  ಜೀ ವಾಹಿನಿಯ ಹೊಸ ಕೊಡುಗೆ  ನೀಡುತ್ತಿದ್ದು“ ಅರ್ಜುನ್ ಜನ್ಯ ಲೈವ್ ಇನ್ ಕಾನ್ಸೆರ್ಟ್ ” ಹಮ್ಮಿಕೊಂಡಿದೆ.

ಅಂತರಾಷ್ಟ್ರೀಯ ಮಟ್ಟದ ಅತ್ಯದ್ಬುತವಾದ ಮ್ಯೂಸಿಕಲ್ ಶೋನ ಕರ್ನಾಟಕದ ಕನ್ನಡಿಗರ ಮುಂದೆ  ವೈಭವಪೂರ್ವವಾಗಿ ತರುವ ಪ್ರಯತ್ನವನ್ನು ಅರ್ಜುನ್ ಜನ್ಯ, ಜೀ ಕನ್ನಡ ವಾಹಿನಿ ಹಾಗೂ ಮೈಸೂರಿನ ಸೈಲೆಂಟ್ ಶೋರ್ ರೆಸಾರ್ಟ್ ಕಳೆದ ವರ್ಷ ಆರಂಭಿಸಿ ಯಶಸ್ವಿಯಾಗಿತ್ತು, ಈಗ ಆ ಯಶಸ್ಸಿನ ಮುಂದುವರಿಕೆಯಾಗಿ  ನಿಮ್ಮ ಮುಂದೆ ಬರಲಿದೆ  “ಅರ್ಜುನ್ ಜನ್ಯ ಲೈವ್ ಇನ್ ಕಾನ್ಸೆರ್ಟ್”

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ನೇತೃತ್ವದಲ್ಲಿ ಅರಮನೆ ನಗರಿ ಮೈಸೂರಿನಲ್ಲಿ ನಡೆದ “ ಅರ್ಜುನ್ ಜನ್ಯ ಲೈವ್ ಇನ್ ಕಾನ್ಸೆರ್ಟ್” ಸಾವಿರಕ್ಕೂ ಹೆಚ್ಚಾಗಿ ನೆರದಿದ್ದ ವೀಕ್ಷಕರಿಗೆ ಸಂಗೀತದ ರಸದೌತಣ ನೀಡಿತು.  ವಿಜಯ್ ಪ್ರಕಾಶ್ ಹಾಗೂ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಶೋ ನಡಿಸಿಕೊಟ್ಟ ಅರ್ಮಾನ್ ಮಲ್ಲಿಕ್ ಜೊತೆ ಕನ್ನಡದ ಜನಪ್ರಿಯ ಗಾಯಕರು ಅಂದು ಗಂಧರ್ವ ಲೋಕವನ್ನು ಮೈಸೂರಿನಲ್ಲಿ ಸೃಷ್ಠಿಸಿದ್ದರು.

ನೆರೆದಿದ್ದ ವೀಕ್ಷಕರೆದುರು ಅರ್ಜುನ್ ಜನ್ಯ ಪಾಶ್ಚಾತ್ಯ ಹಾಗೂ ದೇಸಿ ಕಲೆಗಳನ್ನ ಸೇರಿಸಿ ಒಂದು ಅದ್ಬುತ ಜುಗಲ್ಬಂದಿ ಪ್ರಸ್ತುತ ಪಡಿಸಿದ್ದು ಆ ದಿನದ ಒಂದು ವೈಶಿಷ್ಠ್ಯ. ವಿಜಯ್ ಪ್ರಕಾಶ್ 2018ರ ಜನಪ್ರಿಯ ಗೀತೆಗಳನ್ನು ತಮ್ಮದೇ ದಾಟಿಯಲ್ಲಿ ಹಾಡಿ ರಂಜಿಸಿದರು. ಮಾದಕ ದನಿಯ ಅರ್ಮಾನ್ ಮಲ್ಲಿಕ್ ತಮ್ಮ ಹಾಡಿನೊಂದಿಗೆ ಯುವಜನರನ್ನು  ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದರು.

ಜೊತೆಗೆ ಕನ್ನಡದ ಖ್ಯಾತ ಗಾಯಕರಾದ ಅನುರಾಧ ಭಟ್, ವ್ಯಾಸರಾಜ್, ಇಂದು ನಾಗರಾಜ್, ಲಕ್ಷ್ಮಿ ನಾಗರಾಜ್, ಶಮಿತಾಮಲ್ನಾಡ್ ಎಲ್ಲರೂ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು. ಜೊತೆಗೆ ವಾಹಿನಿಯ ಸರಿಗಮಪ ಕಾರ್ಯಕ್ರಮದ ಪ್ರಖ್ಯಾತ ಮೆಹಬೂಬ್ ಸಾಬ್, ಜ್ಞಾನೇಶ್, ನೇಹ ಅಂದು ತಮ್ಮ ವಿಶೇಷ ಹಾಡುಗಾರಿಕೆಯಿಂದ ಎಲ್ಲರನ್ನೂ ಮನರಂಜಿಸಿದ್ದರು.

ಅದ್ದೂರಿ ಸೆಟ್ , ಮೈ ನವಿರೇಳಿಸೋ ಸಂಗೀತ , ನಿಮ್ಮ ನೆಚ್ಚಿನ ಗಾನತಾರೆಯರ ಜೊತೆಗೆ  ನಿಮ್ಮ ಮುಂದೆ ಪ್ರಸಾರವಾಗಲಿದೆ “ಅರ್ಜುನ್ ಜನ್ಯ ಲೈವ್ ಇನ್ ಕಾನ್ಸೆರ್ಟ್” ನಿಮ್ಮ  ಜೀ ಕನ್ನಡವಾಹಿನಿಯಲ್ಲಿ ಇದೇ ಜೂನ್ 30 ಹಾಗೂ ಜುಲೈ 1ರಂದು ಪ್ರಸಾರವಾಗಲಿದೆ.

Leave a Reply

Your email address will not be published.

Social Media Auto Publish Powered By : XYZScripts.com