FIFA 2018 : ಮಿಂಚಿದ ಮೆಸ್ಸಿ, ರೋಜೊ : ಪ್ರೀ ಕ್ವಾರ್ಟರ್ ಹಂತಕ್ಕೆ ಅರ್ಜೆಂಟೀನಾ

ಸೇಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಡಿ’ ಗುಂಪಿನ ಲೀಗ್ ಪಂದ್ಯದಲ್ಲಿ ನೈಜೀರಿಯಾ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ಫಿಫಾ ವಿಶ್ವಕಪ್-2018 ಟೂರ್ನಿಯ ಪ್ರೀ ಕ್ವಾರ್ಟರ್ ಹಂತವನ್ನು ಪ್ರವೇಶಿಸಿದೆ. ಅರ್ಜೆಂಟೀನಾ ಪರವಾಗಿ ಲಿಯೊನೆಲ್ ಮೆಸ್ಸಿ (14″) ಹಾಗೂ ಮಾರ್ಕೊಸ್ ರೊಜೊ (86″) ಗೋಲ್ ದಾಖಲಿಸಿ ಗೆಲುವಿಗೆ ಕಾರಣರಾದರು.

ಫಿಸ್ಟ್ ಮೈದಾನದಲ್ಲಿ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪೆರು 2-0 ಗೆಲುವು ಸಾಧಿಸಿದೆ. ಲುಝ್ನಿಕಿ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ಲೀಗ್ ಪಂದ್ಯದಲ್ಲಿ ಡೆನ್ಮಾರ್ಕ್ ಹಾಗೂ ಫ್ರಾನ್ಸ್ ತಂಡಗಳ ನಡುವಿನ ಲೀಗ್ ಪಂದ್ಯ 0-0 ಡ್ರಾನಲ್ಲಿ ಕೊನೆಗೊಂಡಿದೆ. ರೊಸ್ಟೊವ್ ಅರೆನಾದಲ್ಲಿ ನಡೆದ ‘ಡಿ’ ಗುಂಪಿನ ಲೀಗ್ ಪಂದ್ಯದಲ್ಲಿ ಐಸ್ಲ್ಯಾಂಡ್ ವಿರುದ್ಧ ಕ್ರೊವೇಶಿಯಾ 2-1ರಿಂದ ಜಯ ಸಾಧಿಸಿದೆ.

 

Leave a Reply

Your email address will not be published.