ಕಾಡಿನ ಗಜರಾಜನ ಜೊತೆ ಫೋಟೋ ತೆಗೆಸಿಕೊಂಡ ಸ್ಯಾಂಡಲ್‌ವುಡ್‌ನ ಐರಾವತ

ಇತ್ತೀಚೆಗೆ ಅರಣ್ಯ ಇಲಾಖೆಯ ಬ್ರಾಂಡ್​ ಅಂಬಾಸಿಡರ್​ ಆಗಿ ಆಯ್ಕೆ ಆಗಿರುವ ಚಾಲೆಂಜಿಂಗ್​ ಸ್ಟಾರ್​​​ ದರ್ಶನ್​​​, ಕಬಿನಿ ಅರಣ್ಯದಲ್ಲಿ ಒಂದು ರೌಂಡ್‌ ಹಾಕಿ ಬಂದಿದ್ದಾರೆ.

ಇದೇ ವೇಳೆ ಕಾಡಿನಲ್ಲಿ ಆನೆಗಳ ಜೊತೆ ನಿಂತುಕೊಂಡು  ಸ್ಯಾಂಡಲ್‌ವುಡ್‌ನ ಗಜ ಫೋಟೋ ತೆಗೆಸಿಕೊಂಡಿದ್ದು, ಪ್ರಾಣಿಪ್ರಿಯರು ಸೇರಿದಂತೆ  ದರ್ಶನ್‌ ಅಭಿಮಾನಿಗಳೆಲ್ಲರೂ  ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಕಬಿನಿ ಹಿನ್ನೀರಿನ ಅರಣ್ಯದಲ್ಲಿ ಆನೆ ಜೊತೆ ಹಾಗೂ ಕಾಡಿನ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇಂದು ಬೆಳಗ್ಗೆ ಸಫಾರಿಗೆ ಹೋದ ದರ್ಶನ್, ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿ ಸೌಂದರ್ಯ ಹಾಗೂ ತಮಗೆ ಎದುರಾಗುವ ಕಾಡು ಪ್ರಾಣಿಗಳ ಫೋಟೋ ಕ್ಲಿಕ್ಕಿಸಿದರು.

ಸದ್ಯ ಚಿತ್ರೀಕರಣದಿಂದ ದರ್ಶನ್ ಬ್ರೇಕ್ ತೆಗೆದುಕೊಂಡಿದ್ದಾರೆ. ದರ್ಶನ್ ಬಿಡುವಿನ ಸಮಯದಲ್ಲಿ ಮೈಸೂರಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದು, ಕಳೆದ ಎರಡು ದಿನಗಳಿಂದ ಮೈಸೂರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com