ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ : ಆರ್.ವಿ ದೇಶಪಾಂಡೆ

ಶಿವಮೊಗ್ಗ – ಶಿವಮೊಗ್ಗದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿಕೆ ನೀಡಿದ್ದಾರೆ. ‘ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯನವರ ಭಿನ್ನಾಭಿಪ್ರಾಯ ಇಲ್ಲ. ನಮಗೂ ಕೂಡ ಸಾಲ ಮನ್ನಾ ಮಾಡಬೇಕೆಂಬುದು ವಿಶ್ವಾಸವಿದೆ ‘ ಎಂದಿದ್ದಾರೆ.

‘ಇದುವರೆಗೂ ಯಾವ ಜಿಲ್ಲೆಯ ಉಸ್ತುವರಿ ಸಚಿವರನ್ನು ನೇಮಕ ಮಾಡಿಲ್ಲ. ಸಿದ್ದರಾಮಯ್ಯನವರನ್ನು ಕೆಲ ಶಾಸಕರು ಭೇಟಿ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ‘ ಎಂದು ಹೇಳಿದ್ದಾರೆ.

‘ ಕಾಮನ್ ಮಿನಿಮಮ್ ಪ್ರೋಗ್ರಾಂ ಸಮಿತಿ ಮಾಡಿ ಎರಡು ಪಕ್ಷದ ಪ್ರಣಾಳಿಕೆ ಹೊಂದಾಣಿಕೆ ಮಾಡಿ ಕಾರ್ಯರೂಪಕ್ಕೆ ತರಲಾಗುತ್ತೆ. ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಕೆಲ ಯೋಜನೆಗಳನ್ನು ಕುಮಾರ ಸ್ವಾಮಿರವರ ಬಜೆಟ್ ನಲ್ಲಿ ಮುಂದುವರಿಸಲಾಗುತ್ತೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com