ಪುಂಡರ ವಿರುದ್ಧ ನೀಡಿದ್ದ ದೂರಿಗೆ ಸ್ಪಂದಿಸದ ಪೊಲೀಸರು : ಮೋದಿ ಮೊರೆ ಹೋದ ಮೈಸೂರು ಯುವತಿ

ಮೈಸೂರು : ಪುಂಡರ ಹಾವಳಿ ವಿರುದ್ಧ ಯುವತಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯುವತಿ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾಳೆ.

ಯುವತಿಯ ಈ ದೂರಿಗೆ ಸ್ಪಂದಿಸಿರುವ ಪ್ರಧಾನಿ ಕಚೇರಿ, ದೂರು ದಾಖಲಿಸಿಕೊಂಡಿದ್ದು ಮುಂದಿನ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಪ್ರತ್ಯುತ್ತರ ನೀಡಿದೆ. ಜತೆಗೆ ಈ ಸಂಬಂಧ ಸ್ಥಳೀಯ ಮೈಸೂರು ಪೊಲೀಸರು ಬಿಸಿ ಮುಟ್ಟಿಸಿದ್ದು ಅಗತ್ಯ ಕ್ರಮಕ್ಕೆ ಸೂಚಿಸಿದೆ.

ಮೈಸೂರಿನ ಪಂಚವಟಿ ಸರ್ಕಲ್ ಬಳಿ ಯುವತಿಗೆ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ನೀಡಿರುವ ದೂರು ಹಿಂಪಡೆಯುವಂತೆ ಪುಂಡರ ತಂಡ  ಬೆದರಿಕೆ ಹಾಕಿತ್ತು. ಕೆಲ ದಿನಗಳ ಹಿಂದೆ ಈ ಯುವತಿ ಮನೆಗೆ ತೆರಳುತ್ತಿರುವಾಗ ಪಬ್ ಒಂದರ ಬಳಿ ಆ ಯುವತಿ ಅಡ್ಡಗಟ್ಟಿದ ಪುಂಡರ ತಂಡ, ಡ್ರ್ಯಾಗರ್ ತೋರಿಸಿ ಪೊಲೀಸರಿಗೆ ನೀಡಿರುವ ದೂರನ್ನು ಹಿಂಪಡೆಯುವಂತೆ ಯುವತಿಗೆ ಕೊಲೆ ಬೆದರಿಕೆ ಹಾಕಿತ್ತು. ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಯುವತಿ ದೂರು ನೀಡಿದ್ದಳು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಯುವತಿ ಆರೋಪವಾಗಿದೆ.

ಇದರಿಂದ ನೊಂದ ಯುವತಿ ಆರೋಪಿಗಳ ವಿರುದ್ದ ನೇರವಾಗಿ ಪ್ರಧಾನಮಂತ್ರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾಳೆ . ಮೈಸೂರಿನಲ್ಲಿ ಯುವತಿಯರಿಗೆ ರಕ್ಷಣೆ ಇಲ್ಲ . ಪೊಲೀಸರಿಗೆ ದೂರು ಕೊಟ್ಟು 48 ಗಂಟೆ ಕಳೆದ್ರು ಆರೋಪಿಗಳನ್ನ ಬಂದಿಸಿಲ್ಲ ಎಂದು ಪ್ರಧಾನ ಮಂತ್ರಿ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ.  ಪ್ರಧಾನ ಮಂತ್ರಿಗಳ ಕಛೇರಿಯಿಂದ ಯುವತಿಯ ದೂರನ್ನ ಸ್ವೀಕಾರ ಮಾಡಿದ್ದು ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಮೈಸೂರಿನ ಜಯಲಕ್ಷ್ಮಿ ಪುರಂ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ.

Leave a Reply

Your email address will not be published.