ಗದಗ : ‘ಬಾರ್ ಹಠಾವ್ – ಮಠ ಬಚಾವ್’ : ತೋಂಟದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ

ಮಠ ಹಾಗೂ ಧಾರ್ಮಿಕ ಕೇಂದ್ರಗಳ ಸುತ್ತ-ಮುತ್ತ ಬಾರ್ ಗಳನ್ನ ತೆರವುಗೊಳಿಸುವಂತೆ ಆಗ್ರಹಿಸಿ ಸ್ವಾಮೀಜಿಗಳು, ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆಗೆ ಮುಂದಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ತೋಂಟದಾರ್ಯ ಡಾ,ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ “ಬಾರ್ ಹಠಾವ್, ಮಠ ಬಚಾವ್” ಎಂಬ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ತಿರಂಗಾ ಯುವಮೋರ್ಚಾ ಘಟಕ ಕಾರ್ಯಕರ್ತು ತೋಂಟದಾರ್ಯ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು. ಮಠ- ಧಾರ್ಮಿಕ ಕೇಂದ್ರಗಳ ಸುತ್ತ-ಮುತ್ತ ಸುಮಾರು ೨ ನೂರು ಮೀಟರ್ ಒಳಗಿರುವ ಬಾರ್ ಗಳನ್ನ ತೆರವುಗೊಳಿಸಬೇಕು. ತೋಂಟದಾರ್ಯ ಮಠದ ಸುತ್ತ-ಮುತ್ತ ಸುಮಾರು ಆರು ಮದ್ಯದ ಅಂಗಡಿಗಳಿದ್ದು ಮಠಕ್ಕೆ ಬರುವ ಭಕ್ತರಿಗೆ, ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಮದ್ಯವೆಸನಿಗಳ ವರ್ತನೆಗೆ ಬೇಸತ್ತು ಸ್ವಾಮಿಜಿಗಳು, ಸಂಘಟಿಕರು, ಸಾರ್ವಜನಿಕರರು, ಮಹಿಳೆಯರು ಇಂದು ಬೀದಿಗಿಳಿದು ಪ್ರತಿಭಟನೆ ಮಾಡಿದರು. ಮದ್ಯ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಒಳ ಒಪ್ಪಂದಿಂದ ಬಾರ್ ತೆರವಿಗೆ ಮುಂದಾಗುತ್ತಿಲ್ಲ ಎಂದು ತೋಂಟದ ಶ್ರೀಗಳು ಆರೋಪಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com