ಕೇಂದ್ರದಿಂದ ಬೆಳೆ ಪರಿಹಾರ ಬಂದಿಲ್ಲ ಎಂದ ಅಧಿಕಾರಿ : ಮೋದಿ ಸರ್ಕಾರದ ವಿರುದ್ಧ ಮಾತನಾಡಬೇಡಿ ಎಂದ ಶಾಸಕ!

ದಾವಣಗೆರೆ : ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರದ ಹಣ ಬಂದಿಲ್ಲ ಎಂಬ ಅಧಿಕಾರಿ ಹೇಳಿಕೆಗೆ ಬಿಜೆಪಿ ಎಂಎಲ್ಎ ರೇಣುಕಾಚಾರ್ಯ ಗರಂ ಆದ ಘಟನೆ ನಡೆದಿದೆ.

ದಾವಣಗೆರೆ ನಗರದ ಜಿಲ್ಲಾ ಪಂಚಾಯತ್ ನ ಕೆಡಿಪಿ ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಸಿಇಒ ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರ ಬಂದಿಲ್ಲ. ಆದ್ದರಿಂದ ನಾವು ಈ ವಿಷಯವಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ರೇಣುಕಾಚಾರ್ಯ ಸುಮ್ಮನೆ ಕೇಂದ್ರ  ಸರ್ಕಾರದ ವಿರುದ್ದ ಮಾತನಾಡಬೇಡಿ ಎಂದು ಎಲ್ಲರೆದುರೇ ಆವಾಜ್‌ ಹಾಕಿದ್ದಾರೆ.

ಅಭಿವೃದ್ಧಿ ಬಗ್ಗೆ ಸಿಇಒ ಮಾತನಾಡುತ್ತಿರುವ ವೇಳೆ, ರೇಣುಕಾಚಾರ್ಯ ವಿಷಯಾಂತರ ಮಾಡಿದ್ದು,  ಸಿಇಒ ಫೋನ್‌ ರಿಸೀವ್ ಮಾಡಲಿಲ್ಲ ಎಂಬ ಕಾರಣಕ್ಕೆ ಏರು ಧ್ವನಿಯಲ್ಲಿ ಆವಾಜ್‌ ಹಾಕಿದ್ದಾರೆ.  ಇದರಿಂದ ಸಿಟ್ಟಿಗೆದ್ದ ಸಿಇಒ ಅಶ್ವಥಿ ಅಧಿಕಾರಿಗಳಿಗೆ ಈ ರೀತಿ ಗೌರವ ನೀಡುತ್ತೀರ ಎಂದು ಟಾಂಗ್ ನೀಡಿದ್ದಾರೆ. ಕೊನೆಗೆ ರೇಣುಕಾಚಾರ್ಯ ಹಾಗೂ ಅಶ್ವಥಿ ಮಧ್ಯೆ ಜಗಳ ನಡೆದು ಗೊಂದಲದ ಮಧ್ಯೆಯೇ ಸಭೆ ಮುಗಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com