Cricket : ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾಗೆ 4 ವಿಕೆಟ್ ಜಯ : ಟೆಸ್ಟ್ ಸರಣಿ ಸಮ

ಬಾರ್ಬಡೋಸ್ ಕೆನ್ಸಿಂಗ್ಟನ್ ಮೈದಾನದಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ 4 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿದೆ. ಇದರೊಂದಿಗೆ 4 ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲಗೊಂಡಿದೆ.

ಗೆಲ್ಲಲು 2ನೇ ಇನ್ನಿಂಗ್ಸ್ ನಲ್ಲಿ 144 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಶ್ರೀಲಂಕಾ ತಂಡ 40.2 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಲಂಕಾ ಪರವಾಗಿ ಕುಸಾಲ್ ಪೆರೆರಾ 28, ಕುಸಾಲ್ ಮೆಂಡಿಸ್ 25, ದಿಲ್ರುವಾನ್ ಪೆರೆರಾ 23 , ದನುಷ್ಕಾ ಗುಣತಿಲಕ 21 ರನ್ ಗಳಿಸಿದರು.

ಪಂದ್ಯದಲ್ಲಿ ಒಟ್ಟು 9 ವಿಕೆಟ್ ಕಬಳಿಸಿದ ವಿಂಡೀಸ್ ತಂಡದ ಕ್ಯಾಪ್ಟನ್, ವೇಗದ ಬೌಲರ್ ಜೇಸನ್ ಹೋಲ್ಡರ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು. ಶೇನ್ ಡೌರಿಚ್ ಸರಣಿ ಶ್ರೇಷ್ಟ ಪ್ರಶಸ್ತಿ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com