ಏಳೇಳು ಜನ್ಮಕ್ಕೂ ಈಗಿರುವ ಪತ್ನಿ ಬೇಡವೆಂದು ವಟ ಸಾವಿತ್ರಿ ವ್ರತ ಕೈಗೊಂಡ ಪತಿ !!

ಚಿಕ್ಕೋಡಿ : ಸಾಮಾನ್ಯವಾಗಿ ಏಳೇಳು ಜನ್ಮಕ್ಕೂ ಇವನೇ ನನ್ನ ಗಂಡನಾಗಿರಲಿ ಎಂದು ಪತ್ನಿಯಂದಿರು ವಟಸಾವಿತ್ರ ವ್ರತ ಮಾಡುವುದು ಸಾಮಾನ್ಯ. ಆದರೆ ಚಿಕ್ಕೋಡಿಯಲ್ಲಿ ವ್ಯಕ್ತಿಯೊಬ್ಬರು  ಪತ್ನಿಯ ಕಿರುಕುಳ ತಾಳಲಾರದೆ ಏಳೇಳು ಜನ್ಮಕ್ಕೂ ಇವಳು ನನ್ನ  ಪತ್ನಿಯಾಗುವುದು ಬೇಡ ಎಂದು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದು, ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಪತ್ನಿ ಪೀಡಿತರಾಗಿರುವ ಶಶಿಧರ್‌ ರಾಮಚಂದ್ರ ಎಂಬುವವರು ವಟ ಸಾವಿತ್ರಿ ವ್ರತದ ಹಿನ್ನೆಲೆಯಲ್ಲಿ ಈಗಿರುವ ಹೆಂಡತಿ ಮಾತ್ರ ತನಗೆ ಬೇಡವೇ ಬೇಡ ಎಂದು ಪೂಜೆ ಸಲ್ಲಿಸಿದ್ದಾರೆ.

ನನ್ನ ಹೆಂಡತಿ ಈ ಜನ್ಮದಲ್ಲಿ ತನಗೆ ಹಾಗೂ ನನ್ನ ತಂದೆ ತಾಯಿ ಸೇರಿದಂತೆ ಕುಟುಂಬದವರ ಮೇಲೆ ಸುಳ್ಳು ವರದಕ್ಷಿಣೆ ಪ್ರಕರಣ ದಾಖಲಿಸಿ ಕಿರುಕುಳ ನೀಡಿದ್ದಾಳೆ. ಹೀಗಾಗಿ ಈ ಹೆಂಡತಿ ನನಗೆ ಮುಂದಿನ ಜನಮದಲ್ಲಿ ಬೇಡ ಎಂದು ಅವರು ಅತ್ತಿ ಮರಕ್ಕೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ಮುಂದಿನ ಜನ್ಮದಲ್ಲಿ ನಾನು ಬ್ರಹ್ಮಚಾರಿಯಾಗಿ ಬೇಕಾದರೂ ಇರುತ್ತೇನೆ.ಆದರೆ ಈ ರೀತಿಯ  ಪತ್ನಿ ಮಾತ್ರ ಬೇಡ ಎಂದು ಪ್ರಾರ್ಥನೆ ಸಲ್ಲಿಸಿದ್ದು, ಪುರುಷ ಸಾಂತ್ವನ ಕೇಂದ್ರ ಸ್ಥಾಪಿಸಿದ್ದಾರಂತೆ.

 

Leave a Reply

Your email address will not be published.

Social Media Auto Publish Powered By : XYZScripts.com