ಚುಡಾಯಿಸಿದ ಭೂಪನಿಗೆ ಚಪ್ಪಲಿ ಸೇವೆ ಮಾಡಿದ ಯುವತಿ : ಎಲ್ಲೆಡೆ ವೈರಲ್ಲಾಗ್ತಿದೆ ವಿಡಿಯೋ..

ಬೀದರ್ : ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಒಂಟಿ ಯುವತಿಯನ್ನು ಚುಡಾಯಿಸಿದ್ದ ಯುವಕನಿಗೆ ಸಾರ್ವಜನಿಕರು ಚಪ್ಪಲಿ ಸೇವೆ ಮಾಡಿರುವ ಘಟನೆ ನಡೆದಿದೆ.

ಆರೋಪಿಯನ್ನು ಅಶೋಕ್‌ ಎಂದು ಹೆಸರಿಸಲಾಗಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಮಂಗಳವಾರ ಬಸ್ ನಿಲ್ದಾಣದಲ್ಲಿ ಯುವತಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದಳು. ಈ ವೇಳೆ ಅಶೋಕ್ ಯುವತಿಯನ್ನ ಕಣ್ಸನ್ನೆ ಮಾಡಿದ್ದು, ಸುಮ್ಮಸುಮ್ಮನೆ ನಗುವುದು, ಅಸಭ್ಯವಾಗಿ ವರ್ತಿಸಿದ್ದಾನೆ. ಬಳಿಕ ಯುವತಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ. ಸಿಟ್ಟಿಗೆದ್ದ ಯುವತಿ ಚಪ್ಪಲಿ ತೆಗೆದುಕೊಂದು ಥಳಿಸಿದ್ದಾಳೆ.

ಇದೇ ವೇಳೆಯಲ್ಲಿ ಅಲ್ಲಿದ್ದ ಮಹಿಳೆಯರು ಕೂಡ ಯುವತಿಗೆ ಸಾಥ್ ನೀಡಿದ್ದು, ಒಂಟಿ ಯುವತಿಯನ್ನ ಚುಡಾಯಿಸಿದವನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com