ಸಿದ್ದರಾಮಯ್ಯ ಬೆನ್ನಿಗೆ ಚೂರಿ ಹಾಕಿದ ಆಪ್ತರು : ವಿಡಿಯೋ ಕುರಿತು ಮಾಜಿ ಸಿಎಂ ಹೇಳಿದ್ದೇನು ?

ಬೆಂಗಳೂರು : ಸಿಎಂ ಆಗಿದ್ದಾಗ ರಾಜನಂತೆ ಎಲ್ಲರಿಗೂ ಆದೇಶಿಸುತ್ತಿದ್ದ ಸಿದ್ದರಾಮಯ್ಯ ಮಾತು ಈಗ ಕಿಮ್ಮತ್ತು ಕಳೆದುಕೊಂಡಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದು, ನನ್ನ ಆಪ್ತರೇ ನನ್ನ ಬೆನ್ನಿಗೆ ಚೂರಿ ಹಾಕಿದರು  ಎಂದಿದ್ದಾರೆ.

ನಿನ್ನೆಯಷ್ಟೇ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಐದು ವರ್ಷ ಆಡಳಿತ ಮಾಡುವುದಿಲ್ಲ ಎಂಬ ಹೇಳಿಕೆ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ಸಿದ್ದರಾಮಯ್ಯ ತಮ್ಮ ಆಪ್ತರೊಟ್ಟಿಗೆ ಮಾತನಾಡಿದ್ದು, ಅದನ್ನೇ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡಿ ವೈರಲ್ ಮಾಡಿದ್ದಾರೆ. ಸರ್ಕಾರದ ಕುರಿತು ಉದ್ದೇಶ ಪೂರ್ವಕವಾಗಿ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮಾತಿನ ಭರಾಟೆಯಲ್ಲಿ ಹೇಳಿಕೆ ನೀಡಿದ್ದೇನಷ್ಟೇ ಎಂದಿರುವುದಾಗಿ ಮೂಲಗಳು ತಿಳಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com