ಸಿದ್ದರಾಮಯ್ಯ ಆಪ್ತ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಎಚ್‌ಡಿಕೆ ಸರ್ಕಾರ !

ಬೆಂಗಳೂರು : ಧರ್ಮಸ್ಥಳದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರೆ, ಮತ್ತೊಂದೆಡೆ ಸಿಎಂ ಕುಮಾರಸ್ವಾಮಿ ಸಿದ್ದರಾಮಯ್ಯ ಆಪ್ತ ಅಧಿಕಾರಿಗಳನ್ನು ಎಚ್‌ಡಿಕೆ ಸರ್ಕಾರ ಎತ್ತಂಗಡಿ ಮಾಡಿದ್ದಾರೆ.

ಆಡಳಿತ ಸಿಬ್ಬಂದಿ ಹಾಗೂ ಸುಧಾರಣಾ ಇಲಾಖೆ ಅಧೀನ ಕಾರ್ಯದರ್ಶಿಗಳು ಹೊರ ಡಿಸಿರುವ ಆದೇಶ ಪ್ರತಿಯಲ್ಲಿ 9 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಡಾ. ಇ.ವಿ ರಮಣ ರೆಡ್ಡಿಯವರನ್ನು ಸಿಎಂ ಪ್ರಧಾನ ಕಾರ್ಯದರ್ಶಿಯನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

ಐಎಎಸ್ ಅಧಿಕಾರಿಗಳ ವರ್ಗಾವಣೆಯ ಅಂತಿಮ ಪಟ್ಟಿ ಇಲ್ಲಿದೆ.

ಡಾ.ಇ.ವಿ.ರಮಣ ರೆಡ್ಡಿ- ಸಿಎಂ ಪ್ರಧಾನ‌‌ ಕಾರ್ಯದರ್ಶಿ
ಬಿ ಎಂ ವಿಜಯಶಂಕರ್-ಬೆಂಗಳೂರು ಡಿಸಿ
ಬಿ ಎ ಶೇಖರಪ್ಪ- ನಿರ್ದೇಶಕರು, ಕಾಡಾ, ಬೆಂಗಳೂರು
M ಲಕ್ಷ್ಮಿ ನಾರಾಯಣ-ಹೆಚ್ಚುವರಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಕಪಿಲ್ ಮೋಹನ್-ಡಿಜಿ ಆಡಳಿತ ಮತ್ತು ತರಬೇತಿ ಸಂಸ್ಥೆ, ಮೈಸೂರು
ಟೆ.ಕೆ ಅನಿಲ್ ಕುಮಾರ್-ಕಾರ್ಯದರ್ಶಿ, ವಸತಿ‌ ಇಲಾಖೆ
ಮನೀಶ್ ಮೌದ್ಗಿಲ್-ಆಯುಕ್ತರು, ಸರ್ವೆ ಭೂದಾಖಲೆ ಇಲಾಖೆ, ಬೆಂಗಳೂರು
ನಿತೇಶ್ ಪಟೇಲ್- ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ
ನಳಿನಿ ಅತುಲ್- ಜಂಟಿ ವ್ಯವಸ್ಥಾಪಕ ನಿರ್ದೇಶಕಿ, KUIDFC, ಬೆಂಗಳೂರು

Leave a Reply

Your email address will not be published.