ಬಜೆಟ್ ದಿನವೇ ಸಿಎಂಗೆ ಎದುರಾಯ್ತು ಕಂಟಕ : ಹಳೇ ಪ್ರಕರಣಕ್ಕೆ ಮರುಜೀವ ನೀಡಿದ ಕೋರ್ಟ್‌ !

ಬೆಂಗಳೂರು : ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ. 2006 ರಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಈಗ ಮರು ಜೀವ ಬಂದಿದೆ.

ಈ ಹಿಂದೆ ಅವರು ಸಿಎಂ ಆಗಿದ್ದಾಗ ಮಾಡಿದ್ದ ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿ ಡಿನೋಟಿಫಿಕೇಷನ್​ ಪ್ರಕರಣ ಈಗ ಸಿಎಂ ಗೆ ಉರುಳಾಗಿದ್ದು,​ ಶ್ರೀರಾಮ್​ ಹಾಗೂ ರವಿಪ್ರಕಾಶ್​ ಎಂಬುವವರಿಗೆ ಸಿಎಂ ಡಿನೋಟಿಫಿಕೇಷನ್​ ಮಾಡಿಕೊಟ್ಟಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಬಿಡಿಎ ಸದರಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಪರಿಹಾರ ನೀಡಿ, ನಿವೇಶನ ಹಂಚಿಕೆ ಮಾಡಿತ್ತು. ಆಗಿನ ಅರಣ್ಯ ಸಚಿವ ಚೆನ್ನಿಗಪ್ಪ ಮನವಿ ಮೇರೆಗೆ ಕುಮಾರಸ್ವಾಮಿ ಡಿನೋಟಿಫಿಕೇಷನ್​ ಮಾಡಿದ್ದರು. ಇದರಿಂದ ಕೋಟ್ಯಾಂತರ ರೂಪಾಯಿ ಲಾಭ ಗಳಿಸಿದ್ದರು. ಸಿಎಂ ಹೆಚ್ಡಿಕೆ ಮತ್ತು ಚನ್ನಿಗಪ್ಪ ಮಾರಾಟದಲ್ಲಿ ಪಾಲು ಪಡೆದಿದ್ದಾರೆ ಎಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.

2012ರಲ್ಲಿ ಮಹದೇವಸ್ವಾಮಿ ಎಂಬುವವರು ಲೋಕಾಯುಕ್ತ ಕೋರ್ಟ್​ನಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಈ ಮಧ್ಯೆ, ಪ್ರಕರಣದಲ್ಲಿ ಎಚ್​.ಡಿ. ಕುಮಾರಸ್ವಾಮಿ ನಿರೀಕ್ಷಣಾ ಜಾಮೀನು ಪಡೆದು ಪ್ರಕರಣ ರದ್ಧತಿಗೆ ಹೈಕೋರ್ಟ್​​ಗೆ ಹೋಗಿದ್ದರು. ಹೈಕೋರ್ಟ್​ ಪ್ರಕರಣ ರದ್ದು ಮಾಡಲು ನಿರಾಕರಿಸಿ, ತನಿಖೆಗೆ ಆದೇಶಿಸಿತ್ತು. ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿದ್ದರು. ಆರೋಪ ಪಟ್ಟಿ ಸಲ್ಲಿಕೆ ನಂತರ ಕೋರ್ಟ್ ಹಲವು ಬಾರಿ ಹೆಚ್​ಡಿಕೆಗೆ ನೋಟಿಸ್​ ಜಾರಿ ಮಾಡಿತ್ತು. ಆದರೆ, ಕುಮಾರಸ್ವಾಮಿ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಆದರೆ ಈಗ ಜುಲೈ 5ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸಿಎಂ ಗೆ ನ್ಯಾಯಾಲಯ ಖಡಕ್‌ ಆದೇಶ ಹೊರಡಿಸಿದೆ.

 

Leave a Reply

Your email address will not be published.

Social Media Auto Publish Powered By : XYZScripts.com