ಹಿಮಾಲಯ ಪರ್ವತ ಏರಿದ ಮೈಸೂರು ನಾರಿಯರು : ಟೈಗರ್ ಅಡ್ವೆಂಚರ್ ಫೌಂಡೇಷನ್ ತಂಡದ ಸಾಹಸ

ಮೈಸೂರಿನ‌ 27 ಮಹಿಳೆಯರ ತಂಡವೊಂದು ಹಿಮಾಲಯ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ. ಹಿಮಾಲಯ ಪರ್ವತದಲ್ಲಿ  ಸುಮಾರು 14.500 ಸಾವಿರ ಅಡಿ ಎತ್ತರದಲ್ಲಿರುವ ಕಡಿದಾದ ಮೌಂಟ್ ಬರಾಟ್ ಸರ್ ಪರ್ವತ ಏರಿದ ಮಹಿಳೆಯರು ತ್ರಿವರ್ಣ ಧ್ವಜ ಹಾರಿಸಿದ್ದಾರೆ.

ಮೈಸೂರಿನ ಟೈಗರ್ ಅಡ್ವೆಂಚರ್ ಫೌಂಡೇಷನ್ ವತಿಯಿಂದ ಈ ಸಾಹಸವನ್ನು ಆಯೋಜಿಸಲಾಗಿತ್ತು. ಪ್ರಧಾನಿ‌ ಮೋದಿಯ ನಾರಿ ಶಕ್ತಿ ವಾಕ್ಯದಿಂದ ಸ್ಪೂರ್ತಿ ಪಡೆದ ಪರ್ವತಾರೋಹಣ ಮಾಡಿದ್ದಾರೆ. ಗಣರಾಜ್ಯೋತ್ಸವ ಪೆರೇಡ್ ಸಂದರ್ಭದಲ್ಲಿ ಸೇನಾ‌ ಮಹಿಳೆಯರು ನಡೆಸಿದ‌ ಪಥಸಂಚಲನ ವೀಕ್ಷಿಸಿದ್ದ ಪ್ರಧಾನಿ  ನಾರೀಶಕ್ತಿ ಎಂದಿದ್ದರು.

ಪರ್ವತ ಏರಿ ಇಳಿಯಲು 8 ದಿನ‌ ಪಡೆದ ಮಹಿಳೆಯರ ತಂಡದಲ್ಲಿ 13 ವರ್ಷದಿಂದ‌ 65 ವಯಸ್ಸಿನ ಮಹಿಳೆಯರು ಭಾಗಿಯಾಗಿದ್ದರು. 27 ಮಹಿಳೆಯರಲ್ಲಿ 14 ಗೃಹಿಣಿಯರು ಪರ್ವತಾರೋಹಣದಲ್ಲಿ ಭಾಗಿಯಾಗಿದ್ದಾರೆ. ಮಹಿಳೆಯರ ಜೊತೆ ಸರ್ಕಾರಿ ಪ್ರಾಶ್ಚತ್ಯಾ ಮತ್ತು ಪುರಾತತ್ವ ಇಲಾಖೆ ಅಧಿಕಾರಿ ನಿರ್ಮಲಾ ಮಠಪತಿ  ಮಹಿಳೆಯರ ಜೊತೆ ಪರ್ವತದ ಮೇಲೆ ಹೆಜ್ಜೆ ಹಾಕಿದ್ದರು.

Leave a Reply

Your email address will not be published.