ಭೂತ -ಪ್ರೇತ ಏನೂ ಇಲ್ಲ ಎಂದು ಜನರಿಗೆ ತಿಳಿಸಲು 3 ರಾತ್ರಿ ಸ್ಮಶಾನದಲ್ಲೇ ಮಲಗಿದ ಶಾಸಕ !!

ಹೈದರಾಬಾದ್ : ಮೂಢನಂಬಿಕೆಯ ವಿರುದ್ಧದ ಹೋರಾಟದಲ್ಲಿ ಪಶ್ಚಿಮ ಗೋದಾವರಿಯ ತೆಲುಗು ದೇಶಂ ಪಕ್ಷದ ಶಾಸಕ ನಿಮ್ಮಲ ರಾಮ ನಾಯ್ಡು ಸಾಹಸ ಮೆರೆದಿದ್ದಾರೆ.

ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡು ಅವರು ತಮ್ಮ ಊರಿನ ರುದ್ರಭೂಮಿಯೊಂದರ ಕಟ್ಟಡವನ್ನು ನವೀಕರಿಸಲು ಬಯಸಿದ್ದರು. ಆದರೆ ಭೂತದ ಕಾಟವಿರುತ್ತದೆ ಎಂಬ ಭಯದಿಂದ ಯಾರೊಬ್ಬರೂ ಕಾಮಗಾರಿಗೆ ಮುಂದಾಗಿರಲಿಲ್ಲ. ಈ ಭಯ ಹೋಗಲಾಡಿಸಲು ಶಾಸಕ ನಾಯ್ಡು,  ಜೂನ್‌ 22ರಿಂದ ನಿರಂತರ ಮೂರು ರಾತ್ರಿ ಶ್ಮಶಾನದಲ್ಲೇ ಮಲಗಿದ್ದು, ಈ ಸುದ್ದಿ ಈಗ ಎಲ್ಲೆ ಡೆ ವೈರಲ್ ಆಗಿದೆ.

ಪಶ್ಚಿಮ ಗೋದಾವರಿಯ ಪಲಕೋಳೆ ಪಟ್ಟಣದ ರುದ್ರಭೂಮಿಯಲ್ಲಿ ತೀವ್ರ ನುಸಿ ಕಾಟ ಇದ್ದ  ಹೊರತಾಗಿಯೂ ಶಾಸಕ ನಾಯ್ಡು ಅವರು ಬಯಲಿ ನಲ್ಲಿ ಫೋಲ್ಡಿಂಗ್‌ ಕಾಟ್‌ ಬಳಿಸಿ,  ಮೂರು ರಾತ್ರಿ ನಿದ್ದೆ ಮಾಡಿರುವುದು ಒಂದು ಸಾಧನೆಯೇ ಎಂದು ಹಿರಿಯ ಜನಪ್ರತಿನಿಧಿಗಳು ಹೇಳುತ್ತಿದ್ದು ಎಲ್ಲೆ ಡೆ ಶಹಬ್ಬಾಶ್‌ ಗಿರಿ ಕೇಳಿಬರುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಾಸಕ ನಾಯ್ಡು ಅವರು ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟವನ್ನು ಪ್ರಶಂಸಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com