ಫಲ್ಗುಣಿ ನದಿಯ ಸೇತುವೆ ಕುಸಿತ : ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ವೈರಲ್

ಮಂಗಳೂರು : ಮಂಗಳೂರು-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಫಲ್ಗುಣಿ ನದಿಯ ಸೇತುವೆ ಕುಸಿದು ಬಿದ್ದಿದ್ದು, ಇದೀಗ ಮೂರು ತಿಂಗಳ ಹಿಂದೆ ಸ್ಥಳೀಯರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಫಲ್ಗುಣಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದಿದೆ. ಈ ಸೇತುವೆಯು ಬಂಟ್ವಾಳ-ಕುಪ್ಪೆಪದವು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುತ್ತಿತ್ತು. ನಿತ್ಯ ಅನೇಕ ವಾಹನಗಳು ಸಂಚರಿಸುತ್ತಿದ್ದು, ಇಂದು ಕುಸಿದು ಬಿದ್ದಿದೆ. ನೀರು ಕಡಿಮೆಯಾದಾಗ ಅಕ್ರಮವಾಗಿ ಮರುಳುಗಾರಿಕೆ ಮಾಡಿದ್ದರ ಬಗ್ಗೆ ಸ್ಥಳೀಯರು ಮೂರು ತಿಂಗಳ ಹಿಂದೆ ಮಾತನಾಡಿಕೊಂಡಿದ್ದ ವಿಡಿಯೋ ಈಗ ವೈರಲ್ ಆಗಿದೆ.

 

ಸೇತುವೆಯ ಮಧ್ಯದಲ್ಲಿ ಬಿರುಕು ಬಿಟ್ಟಿದ್ದನ್ನು ತೋರಿಸಿ ಜನಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಸಿ ಸ್ಥಳೀಯ ನಾಗರಿಕ ಹಮೀದ್ ಮಲ್ಲರಪಟ್ನ ಎಂಬವರು ತರಾಟೆಗೆ ತೆಗೆದುಕೊಂಡಿದ್ದರು.

ಇಲ್ಲಿ ಅವ್ಯಾಹತವಾಗಿ ಮರಳು ತೆಗೆಯುತ್ತಿದ್ದರಿಂದ ಈ ಬಿರುಕು ಮೂಡಿದೆ ಮುಂದಿನ ದಿನಗಳಲ್ಲಿ ಸಂಪೂರ್ಣ ಕುಸಿದರೆ ಯಾರು ಹೊಣೆ ಎಂದು ಸ್ಥಳೀಯ ಭಾಷೆಯಲ್ಲಿಯೇ ಜನಪ್ರತಿನಿಧಿ ವಿರುದ್ಧ ಹಮೀದ್ ಕೆಂಡಾಮಂಡಲರಾಗಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com