FIFA 2018 : ಸೌದಿಗೆ ಶರಣಾದ ಈಜಿಪ್ಟ್ : ಪ್ರೀ ಕ್ವಾರ್ಟರ್ ಹಂತಕ್ಕೆ ಸ್ಪೇನ್, ಪೋರ್ಚುಗಲ್

ವೊಲ್ಗೊಗ್ರಾಡ್ ಅರೆನಾದಲ್ಲಿ ಸೋಮವಾರ ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾ 2-1 ಗೋಲ್ ಅಂತರದ ಗೆಲುವು ಸಾಧಿಸಿದೆ. ಸೌದಿ ಅರೇಬಿಯಾ ಪರವಾಗಿ ಸಲ್ಮಾನ್ ಅಲ್ ಫರಾಜ್ (45+6″) ಹಾಗೂ ಸಲೆಮ್ ಅಲ್ ದೌಸರಿ (90+5″) ಗೋಲ್ ದಾಖಲಿಸಿದರು. ಈಜಿಪ್ಟ್ ಪರವಾಗಿ 22ನೇ ನಿಮಿಷದಲ್ಲಿ ಫಾರ್ವರ್ಡ್ ಆಟಗಾರ ಮೊಹಮ್ಮದ್ ಸಲಾಹ್ ಏಕೈಕ ಗೋಲ್ ಬಾರಿಸಿದರು.

ಸಮಾರಾ ಅರೆನಾದಲ್ಲಿ ನಡೆದ ‘ಎ’ ಗುಂಪಿನ ಮತ್ತೊಂದು ಲೀಗ್ ಪಂದ್ಯದಲ್ಲಿ ಆತಿಥೇಯ ರಷ್ಯಾ ವಿರುದ್ಧ ಉರುಗ್ವೆ 3-0 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಮರ್ಡೋವಿಯಾ ಅರೆನಾದಲ್ಲಿ ಪೋರ್ಚುಗಲ್ ಹಾಗೂ ಇರಾನ್ ತಂಡಗಳ ನಡುವೆ ನಡೆದ ‘ಬಿ’ ಗುಂಪಿನ ಲೀಗ್ ಪಂದ್ಯ 1-1 ರಿಂದ ಡ್ರಾನಲ್ಲಿ ಕೊನೆಗೊಂಡಿದೆ. ಕ್ಯಾಲಿನಿಂಗ್ರಾಡ್ ಕ್ರೀಡಾಂಗಣದಲ್ಲಿ ಸ್ಪೇನ್ ಹಾಗೂ ಮೊರಾಕ್ಕೊ ತಂಡಗಳ ನಡುವೆ ನಡೆದ ‘ಬಿ’ ಗುಂಪಿನ ಲೀಗ್ ಪಂದ್ಯ 2-2 ರಿಂದ ಡ್ರಾನಲ್ಲಿ ಅಂತ್ಯವಾಗಿದೆ.

ರಷ್ಯಾ, ಉರುಗ್ವೆ, ಸ್ಪೇನ್, ಪೋರ್ಚುಗಲ್, ಫ್ರಾನ್ಸ್, ಕ್ರೊವೇಶಿಯಾ, ಮೆಕ್ಸಿಕೊ ಹಾಗೂ ಇಂಗ್ಲೆಂಡ್ ತಂಡಗಳು ಈಗಾಗಲೇ ಪ್ರೀಕ್ವಾರ್ಟರ್ ಹಂತವನ್ನು ಪ್ರವೇಶಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com