ಪ್ರಣಬ್ ಮುಖರ್ಜಿಯ ನಾಗ್ಪುರ ಭಾಷಣದ ಬಳಿಕ ಆರ್‌ಎಸ್ಎಸ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು !

ಲಖನೌ : ಕೆಲ ದಿನಗಳ ಹಿಂದೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಾಗ್ಪುರದಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ ಸಮಾವೇಶದಲ್ಲಿ ಭಾಗವಹಿಸಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.

ಪ್ರಣಬ್ ಮುಖರ್ಜಿ ಆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಆರ್‌ಎಸ್‌ಎಸ್‌ಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅದರಲ್ಲೂ ಪ್ರಣಬ್‌ ಮುಖರ್ಜಿ ಅವರ ತವರಾದ ಪಶ್ಚಿಮ ಬಂಗಾಳದಲ್ಲಿ ಸಂಘ ಸೇರುತ್ತಿರುವವರ ಸಂಖ್ಯೆ ಏರಿಕೆಯಾಗಿರುವುದಾಗಿ ಆರ್‌ಎಸ್‌ಎಸ್‌ನ ಹಿರಿಯ ನಾಯಕ  ಬಿಪ್ಲಬ್‌ ರಾಯ್ ಹೇಳಿದ್ದಾರೆ.

ಜೂನ್‌ 1ರಿಂದ 6ರವರೆಗೆ ಸಂಘದ ವೆಬ್‌ಸೈಟ್ ಮೂಲಕ 378 ಮಂದಿ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರಂತೆ. ಜೂನ್ 7ರಂದು ಅಂದರೆ ಪ್ರಣಬ್‌ ಭಾಷಣದ ಬಳಿಕ ಒಂದೇ ದಿ ನ 1,779 ಅರ್ಜಿಗಳು  ಸಲ್ಲಿಕೆಯಾಗಿದ್ದು, ಅದಾದ ಬಳಿಕ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುತ್ತಿದೆ ಎಂದು ಬಿಪ್ಲಬ್‌ ಹೇಳಿದ್ದಾರೆ. 

Leave a Reply

Your email address will not be published.

Social Media Auto Publish Powered By : XYZScripts.com