ನಾನು ಪ್ರೀತಿ, ವಿಶ್ವಾಸಕ್ಕೆ ಬಗ್ಗುತ್ತೇನೆಯೇ ಹೊರತು ಬೆದರಿಕೆಗಲ್ಲ, ಅದು ನನ್ನ ಬ್ಲಡ್‌ನಲ್ಲೇ ಇಲ್ಲ : ಡಿಕೆಶಿ

ರಾಮನಗರ : ಬಂಗಾರಪ್ಪನವರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗಲೇ ನನಗೆ ಹೇಳಿದ್ದರು, ಈ ಕಾಲದಲ್ಲಿ ನೀನು ಮಾಜಿ ಆಗ್ತೀಯ ಅಂತ. ಕೆಲವರಿಗೆ ರಾಜಕೀಯದಲ್ಲಿ ಮತ್ತಿರುತ್ತೆ, ಅದು ಇಳಿಬೇಕು. ನನ್ನಿಂದ ಎಲ್ಲಾ ಅಂದ್ರೆ ಅದು ಸಾಧ್ಯವಿಲ್ಲ ಎಂದು ಸಚಿವ ಡಿಕೆಶಿ ಹೇಳಿದ್ದಾರೆ.

ರಾಮನಗರದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  ಬಂಗಾರಪ್ಪನವರ ತರಹ ನಾನು ಕ್ಷೇತ್ರಕ್ಕೆ ಬರದಿದ್ದರು, ನನ್ನನ್ನ ಗೆಲ್ಲಿಸಿದ್ದೀರಿ. ಅದಕ್ಕೆ ನಾನು ಧನ್ಯ.  ಯೋಗ ಬರುತ್ತೆ, ಆದರೆ ಅದನ್ನ ಉಳಿಸಿಕೊಳ್ಳಬೇಕು. ಸುರೇಶ್ ರವರು ಬ್ಯಾಂಕ್ ಮ್ಯಾನೇಜರ್ ಗೆ ಕರೆಮಾಡಿ ಹಣದ ವಹಿವಾಟಿನ ಬಗ್ಗೆ ಮಾತನಾಡಿದ್ದಾರೆ. ಅದಕ್ಕಾಗಿಯೇ ನನ್ನ ಪಿಎಗಳ ಮೇಲೆ ನನ್ನ ಮೇಲೆ, ನನ್ನ ತಮ್ಮನ ಮೇಲೆ ಇಲ್ಲಸಲ್ಲದ ಕೇಸ್ ಹಾಕಿದ್ದಾರೆ. ಬೇಕಾದರೆ ನಮ್ಮನ್ನ ನಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಿ, ಇದಕ್ಕೆಲ್ಲ ಜಗ್ಗಲ್ಲ ಅಂದಿದ್ದೇನೆ ಎಂದಿದ್ದಾರೆ.

ನನ್ನನ್ನ ನನ್ನ ಕುಟುಂಬವನ್ನು ಬೆದರಿಕೆ ಹಾಕಿ ಎದುರಿಸಿ ಗೆಲ್ಲೋಕಾಗಲ್ಲ, ಅದು ನಮ್ಮ ಬ್ಲಡ್ ಅಲ್ಲೇ ಇಲ್ಲ. ಪ್ರೀತಿ ವಿಶ್ವಾಸಕ್ಕೆ ಬಗ್ಗುತ್ತೇನೆಯೇ ಹೊರತು ಬೆದರಿಕೆಗಲ್ಲ. ಯಾವತಾದ್ರೂ ಒಬ್ಬರ ಬಳಿ ಲಂಚಾ ತೆಗೆದುಕೊಂಡಿದ್ದೀನಾ, ಗಟ್ಟಿಧ್ವನಿಯಲ್ಲಿ ಬೈದಿದ್ದೇನೆ ಅಷ್ಟೇ. ನಮ್ಮ ಪಕ್ಷದವರು ನೀನೆ ನೀರಾವರಿ ಮಂತ್ರಿಯಾಗಬೇಕೆಂದು ಈ ಜವಾಬ್ದಾರಿ ಕೊಟ್ಟಿದ್ದಾರೆ. ಇಂಧನ ಇಲಾಖೆಯಲ್ಲಿ ನನ್ನ ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕನಕಪುರಕ್ಕೆ ಕಾರ್ಖಾನೆಗಳು ಬರಲಿವೆ. ಬೆಂಗಳೂರಿಗೆ ವಲಸೆ ಹೋಗಿರುವವರನ್ನ ಇಲ್ಲಿಗೆ ಕರೆತರುತ್ತೇವೆ. ಎತ್ತಿನಹೊಳೆ ಯೋಜನೆ ರಾಮನಗರ ಜಿಲ್ಲೆಗೂ ಬರಬೇಕೆಂದು ಅಧಿಕಾರಿಗೆ ಹೇಳಿದ್ದೇನೆ. ಮೇಕೆದಾಟು ವಿಚಾರದಲ್ಲಿ ಸಿಎಂ ಜೊತೆಗೆ ಚರ್ಚೆ ಮಾಡಿದ್ದೇನೆ. ಬಜೆಟ್ ಇರುವ ಬಗ್ಗೆ ಏನೂ ಭರವಸೆ ಕೊಡೋಕಾಗಲ್ಲ ಎಂದಿದ್ದಾರೆ.

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಈ ಸರ್ಕಾರಕ್ಕೆ ಒಂದೊಂದು ಸೀಟ್ ಮುಖ್ಯವಾಗಿತ್ತು
ಬಿಜೆಪಿಯವರು ಸುಮ್ನನ್ನೆ ಕುಳಿತಿಲ್ಲ, ಅವರು ನಿದ್ರೆ ಮಾಡುತ್ತಿಲ್ಲ. ದಳದವರ ವಿರುದ್ಧ ಯಾರು ಕೇಸ್ ಹಾಕಿಸಬಾರದು, ದ್ವೇಷದ ರಾಜಕಾರಣ ಮಾಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com