ತಾಯಿ ಕಂಕೇರಮ್ಮ, ಕಬ್ಬಾಳಮ್ಮನ ಆಶಿರ್ವಾದ ಇರುವವರೆಗೂ ನಾವು ಯಾರಿಗೂ ಜಗ್ಗಲ್ಲ : ಡಿ.ಕೆ ಸುರೇಶ್

ರಾಮನಗರ : ನನ್ನ ಮಾನ ಮರ್ಯಾದೆ ಉಳಿಯಬೇಕಾದರೆ ನನಗಿಂತಲೂ ಹೆಚ್ಚು ಮತಗಳನ್ನ ಶಿವಕುಮಾರ್ ರವರಿಗೆ ಹಾಕಬೇಕೆಂದು ಮನವಿ ಮಾಡಿದ್ದೆ. ಅಂತೆಯೇ ಶಿವಕುಮಾರ್ 80 ಸಾವಿರ ಅಂತರದಲ್ಲಿ ಗೆದ್ದಿದ್ದಾರೆ ಎಂದು ಸಂಸದ ಡಿ.ಕೆ ಸುರೇಶ್‌ ಹೇಳಿದ್ದಾರೆ.

ರಾಮನಗರದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ರಿಂದ ಜನರಿಗೆ ನಿರೀಕ್ಷೆ ಇದೆ. ನಮಗಿಷ್ಟವೋ, ನಿಮಗಿಷ್ಟವೋ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಸರ್ಕಾರದಲ್ಲಿ ಡಿಕೆಶಿ ನೀರಾವರಿ ಸಚಿವರಗಿದ್ದಾರೆ. ಜಿಲ್ಲೆಯ ನೀರಾವರಿ ಯೋಜನೆ ಸಂಪೂರ್ಣ ಆಗಬೇಕೆಂದು ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ನನ್ನ ಮೇಲೆ, ಶಿವಕುಮಾರ್ ಮೇಲೆ ಅನೇಕ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಆದರೆ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ. ನಿಮಗೆ ಅವಮಾನವಾಗುವಂತ ಕೆಲಸವನ್ನ ನಾವು ಮಾಡಿಲ್ಲ ಎಂದಿದ್ದಾರೆ. ಅಲ್ಲದೆ  ಕೆಂಕೇರಮ್ಮ, ತಾಯಿ ಕಬ್ಬಾಳಮ್ಮನ ಆರ್ಶೀವಾದ ಇರುವವರೆಗೂ ನಾವು ಯಾರಿಗೂ ಬಗ್ಗಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Leave a Reply

Your email address will not be published.