ಮರುಮದುವೆಯಾಗುತ್ತಿರುವ ಮಾಜಿ ಪತ್ನಿಗೆ ವಿಶ್‌ ಮಾಡಿದ ಪವರ್‌ ಸ್ಟಾರ್‌…

ಹೊಸ ಜೀವನಕ್ಕೆ ಕಾಲಿಡುತ್ತಿರುವ ರೇಣು ಅವರಿಗೆ ಹೃದಯಪೂರ್ವಕ ಶುಭಾಶಯಗಳು. ಭಗವಂತ ಆಯಸ್ಸು-ಆರೋಗ್ಯ ಕೊಟ್ಟು, ಜೀವನದಲ್ಲಿ ಸಂತೋಷದಿಂದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಪವನ್ ಟ್ವೀಟ್​ ಮಾಡಿದ್ದಾರೆ.

ಪವನ್ ಅಭಿಮಾನಿಗಳಿಂದ ಕಿಡಿ
 ಪವನ್​ ಮತ್ತು ರೇಣು ಇಬ್ಬರೂ ಜೊತೆಯಾಗಿ ‘ಜಾನಿ’, ‘ಬದ್ರಿ’ ಚಿತ್ರಗಳಲ್ಲಿ ನಟಿಸಿದ್ದರು. ನಂತರ 2009ರಲ್ಲಿ ಇಬ್ಬರು ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಪವನ್​-ರೇಣುಗೆ ಇಬ್ಬರು ಮಕ್ಕಳು ಕೂಡ ಇದ್ದು, ವೈಯಕ್ತಿಕ ಕಾರಣದಿಂದ 2013ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು. ಇದಾದ ಬಳಿಕ ಪವನ್​ ರಷ್ಯಾದ ಆನ್ನಾ ಲೇಜ್ನೋವಾ ಜೊತೆಗೆ ಮತ್ತೊಂದು ವಿವಾಹ ಮಾಡಿಕೊಂಡಿದ್ದಾರೆ. ಇತ್ತ, ರೇಣು ಮಕ್ಕಳಾದ ಅಕಿರಾ ಹಾಗೂ ಆದ್ಯಾ ಜೊತೆಗೆ ಪುಣೆಯಲ್ಲಿ ನೆಲೆಸಿದ್ದಾರೆ.

ಪವನ್ ಕಲ್ಯಾಣ್ ಗೆ ಮೂರು ಪತ್ನಿಯರು

ಇದೀಗ ರೇಣು ತಾವು ಇಷ್ಟ ಪಟ್ಟ ವ್ಯಕ್ತಿವೊಬ್ಬರನ್ನು ಮದುವೆ ಆಗಲು ನಿರ್ಧರಿಸಿದ್ದು, ವಿವಾಹ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಆದರೆ, ವರ ಯಾರು ಎಂಬುವುದು ರೇಣು ಗೌಪ್ಯವಾಗಿಟ್ಟಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com