ಹಾಸನ: ಅತಂತ್ರವಾಗಿಯೇ ಉಳಿದ ಐಎಎಸ್‌ ಅಧಿಕಾರಿ ಡಿ.ರಂದೀಪ್ ಹುದ್ದೆ ವಿಚಾರ

ಹಾಸನ : ರೋಹಿನಿ ಸಿಂಧೂರಿಯನ್ನ ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾಹಿಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಕಾರಣದಿಂದ ಹಾಸನದ ಡಿಸಿಯಾಗಿದ್ದ ಡಿ.ರಂದೀಪ್‌ ರನ್ನು ಹುದ್ದೆಯಿಂದ ನಿಯೂಕ್ತಿಗೊಂಡಿದ್ದಾರೆ. ಆದ್ರೆ ಈವರೆಗೂ ಐಎಎಸ್‌ ಅಧಿಕಾರಿಗೆ ಯಾವುದೇ ಹುದ್ದೆ‌ ನೀಡಿಲ್ಲ.

Image result for d c randeep

ರೋಹಿಣಿ ಸಿಂಧೂರಿ ವರ್ಗಾವಣೆ ಸಮಯದಲ್ಲಿ ಡಿ.ರಂದೀಪ್‌ರನ್ನ ಹಾಸನ ಡಿಸಿಯಾಗಿ ವರ್ಗಾಯಿಸಲಾಗಿತ್ತು. ನಂತರ ವಾರದಲ್ಲೆ ರೋಹಿಣಿ ಸಿಂಧೂರಿ ನ್ಯಾಯಾಲಯದ ಮೋರೆ ಹೋಗಿ ಮತ್ತೆ ಹಾಸನಕ್ಕೆ ಡಿಸಿಯಾಗಿದ್ದಾರೆ. ಇದರಿಂದ ಹಾಸನದ ಡಿಸಿ ಹುದ್ದೆಯಿಂದ ನಿಯೂಕ್ತಿಗೊಳಿಸಿದ್ದ ಡಿ.ರಂದೀಪ್  ಹುದ್ದೆ ವಿಚಾರ ಇನ್ನೂ ಇತ್ಯರ್ಥವಾಗದೇ ಅತಂತ್ರವಾಗಿಯೇ ಉಳಿದ್ದಿದೆ.

ಈ ಬೆಳವಣಿಗಳನ್ನು ಮನನೊಂದ ಡಿ.ರಂದೀಪ್ ‘ನನ್ನ ಕರ್ತವ್ಯ ಸ್ಥಳ‌‌ ನಿಗದಿ ಮಾಡುವಂತೆ ಮನವಿ‌ ಮಾಡಿ’ ಸಿಎಟಿಗೆ ಪತ್ರದ ಮೂಲಕ ತಿಳಿಸಿದ್ದಾರೆ.  ಬರೋಬ್ಬರಿ ಮೂರು ತಿಂಗಳಿನಿಂದ ಕೆಲಸವಿಲ್ಲದೆ  ಐಎಎಸ್ ಅಧಿಕಾರಿ ಡಿ.ರಂದೀಪ್  ಸದ್ಯ ಬೆಂಗಳೂರಿನಲ್ಲಿ ನೆಲೆಯೂಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com