ನಾನು ರೈತ ವಿರೋಧಿ ಅಲ್ಲ, ಸಾಲಮನ್ನಾ ಮಾಡಬೇಡಿ ಅಂತ ಎಲ್ಲೂ ಹೇಳಿಲ್ಲ : ನಿಜಗುಣಾನಂದ ಸ್ವಾಮೀಜಿ

ಹುಬ್ಬಳ್ಳಿಯಲ್ಲಿ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಮದ್ಯವ್ಯಸನಿಗಳು, ಜೂಜಾಟದಿಂದ ರೈತರು ಸಾಲದ ಸುಳಿಗೆ ಸಿಗುವ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು. ‘ ಸಾಲ ಮಾಡಿದರೆ ಶೂಲಕ್ಕೆ ಸಿಲುಕಿದಂತಾಗುತ್ತದೆ. ಸಾಲ ಮಾಡುವುದು ಬದುಕಿಗೆ ಅಪಾಯಕಾರಿ ಅಂತಾ ಬಾದಾಮಿಯಲ್ಲಿ ಕಾರ್ಯಕ್ರಮವೊಂದರಲ್ಲಿ ನಾನು ಹೇಳಿಕೆ ನೀಡಿದ್ದೆ. ಆದರೆ ನಾನು ಯಾವುದೇ ರೀತಿಯ ರೈತರ ಹೆಸರನ್ನು ಬಳಸಿಲ್ಲ ‘ ಎಂದಿದ್ದಾರೆ.

‘ ನಾನು ರೈತರ ಸಾಲ ಮನ್ನಾ ಮಾಡಬೇಡಿ ಅಂತಾ ಎಲ್ಲಿಯೂ ಹೇಳಿಲ್ಲ. ಆದರೆ ನಾನು ರೈತವಿರೋಧಿ ಅಂತ ಮಾದ್ಯಮದಲ್ಲಿ ಬಿಂಬಿಸಲಾಗಿದೆ. ನಾನು ರೈತ ವಿರೋಧಿಯೂ ಅಲ್ಲ ‘ ಎಂದು ಹುಬ್ಬಳ್ಳಿಯಲ್ಲಿ ಬೈಲೂರಿನ ನಿಷ್ಕಲಮಂಟಪ, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಮಹಾಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.