ಕನ್ನಡ ಮಾತಾಡಿದ್ರೆ ಕೀಳರಿಮೆ, ಇಂಗ್ಲೀಷ್ ಮಾತಾಡಿದ್ರೆ ಸುಪೀರಿಯರಾ..? : ರಾಯರೆಡ್ಡಿ ಪ್ರಶ್ನೆ

ಕೊಪ್ಪಳ : ಉನ್ನತ ಶಿಕ್ಷಣ ಸಚಿವ ಜಿ.ಟಿ‌.ದೇವೆಗೌಡ ಬಟ್ಲರ್ ಇಂಗ್ಲೀಷ್ ವಿಚಾರ ಸಂಬಂಧ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಈ ಸಂಬಂಧ ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.

ಜಿ.ಟಿ.ದೇವೆಗೌಡರು ಇಂಗ್ಲೀಷ್ ಮಾತನಾಡುವ ಅವಶ್ಯಕತೆ ಇಲ್ಲ, ಕನ್ನಡದಲ್ಲೆ ಮಾತನಾಡಬೇಕು. ಅವರಿಗೆ ಇಂಗ್ಲೀಷ್ ಬರಲ್ಲಾ ಅನ್ನೋ ಮಾತು ಕೇಳಿ ನನಗೆ ಬಹಳ ಬೇಜಾರಾಗಿದೆ‌. ನಾವೇನು ಇಂಗ್ಲೀಷ್ ಗುಲಾಮರಾ. ನಾವೇಕೆ ಇಂಗ್ಲೀಷ್‌ನಲ್ಲಿ ಮಾತನಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಕನ್ನಡ ಮಾತಾಡಿದ್ರೆ ಕೀಳರಿಮೆ,ಇಂಗ್ಲೀಷ್ ಮಾತಾಡಿದ್ರೆ ಸುಪರೀಯರಾ ಎಂದು ರಾಯರೆಡ್ಡಿ ಹೇಳಿದ್ದು, ನನಗೆ ಸಿಟ್ಟಿದೆ, ನಾನು ಜಿ.ಟಿ ದೇವೇಗೌಡರಿಗೆ ಬೆಂಬಲಿಸುತ್ತೇನೆ. ಖಾತೆ ಹೇಗೆ ನಿರ್ವಹಿಸುತ್ತಾರೆ ಅನ್ನೋದು ಮುಖ್ಯ. ಭಾಷೆ ಮುಖ್ಯ ಅಲ್ಲ .  ಜಿ‌.ಟಿ.ದೇವೇಗೌಡ ಸಂವಿಧಾನತ್ಮಕವಾಗಿ ಸರಿ ಇದಾರೆ. ನಮ್ಮ ಸಂವಿಧಾನದಲ್ಲಿ ಅನಕ್ಷರಸ್ಥರು ಕೂಡಾ ರಾಷ್ಟ್ರಪತಿ, ಪ್ರಧಾನಮಂತ್ರಿ ಮುಖ್ಯಮಂತ್ರಿ ಆಗಲು ಅವಕಾಶವಿದೆ. ವಿದೇಶಿಗರು ಬಂದ್ರೂ ಸಚಿವರು ಕನ್ನಡದಲ್ಲೆ ಮಾತನಾಡಬೇಕು. ಮಧ್ಯೆ ಭಾಷಾ ತರ್ಜುಮೆ ಮಾಡುವರನ್ನ ಬೇಕಾದರೆ ಇಟ್ಟುಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಎರಡುವರೆ ವರ್ಷ ಏನೂ ಆಗಲ್ಲ‌. ಕಾಂಗ್ರೆಸ್ ಪಕ್ಷವೇ ಬೆಂಬಲ ವಾಪಸ್ ತಗೆದುಕೊಳ್ಳಬೇಕು. ಕಾಂಗ್ರೆಸ್ ಗೆ ಅನಿವಾರ್ಯತೆ ಇದೆ, ಕುಮಾರಸ್ವಾಮಿಗೆ ಏನಾಗಬೇಕಿದೆ ಎಂದಿದ್ದಾರೆ. ಎರಡು ವರ್ಷ ಆದ ಬಳಿಕ ಕೆಲವರ ಮನೋಭಾವ ಬದಲಾಗಬಹುದು. ಒಂದು ವೇಳೆ ಏನೂ ಆಗದಿದ್ದರೆ ಐದು ವರ್ಷ ಆಡಳಿತ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com