ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ ಕಾದಂಬರಿ ಆಧರಿತ ‘ಕಳ್ಬೆಟ್ಟದ ದರೋಡೆಕೋರರು’ ಟ್ರೈಲರ್

ಬೆಂಗಳೂರು : ಕಾದಂಬರಿಯಾಧರಿತ ಕಳ್ಬೆಟ್ಟದ ದರೋಡೆಕೋರರು ಸಿನಿಮಾದ ಟ್ರೈಲರ್ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಭಾಗ್ಯರಾಜ್ ಚಿತ್ರದ ಮೂಲಕ ಸ್ಯಾಂಡಲ್’ವುಡ್ ಗಮನ ಸೆಳೆದಿದ್ದ ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರ ನಿರ್ದೇಶಿಸಿರುವ ಕಳ್ಬೆಟ್ಟದ ದರೋಡೆಕೋರರು ಚಿತ್ರದ ಟ್ರೈಲರ್ ರಿಲೀಸ್ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಅನುಷ್ ಶೆಟ್ಟಿ ಬರೆದಿರುವ ಕಳ್ಬೆಟ್ಟದ ದರೋಡೆಕೋರರು ಕಾದಂಬರಿಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ತೆರೆಮೇಲೆ ಬರಲು ಸಿದ್ದವಾಗಿದೆ. ಥ್ರಿಲ್ಲರ್ ಪ್ರಧಾನ ಕಳ್ಬೆಟ್ಟದ ದರೋಡೆಕೋರರು ಟೀಸರ್ ನಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಮೈನವಿರೆಳಿಸುವಂತಿದೆ.

‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್ ಈ ಚಿತ್ರದ ನಾಯಕ ನಟರಾಜ್ ಗೆ ಕಿರುತೆರೆ ನಾಯಕಿ ಶ್ವೇತಾ ಪ್ರಸಾದ್ ಜೋಡಿಯಾಗಿದ್ದಾರೆ. ಮೊದಲ ಬಾರಿಗೆ ಬ್ರಿಡ್ಜ್ ಫಿಲಂ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರಕ್ಕೆ ಅನೂಪ್ ಸೀಲಿನ್ ಸಂಗೀತ ನೀಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com