ಮಹಿಳೆಯರಿಗೆ ಅತಿ ಹೆಚ್ಚು ಅಪಾಯಕಾರಿಯಾಗಿದೆಯಂತೆ ಭಾರತ..!! : ಸಮೀಕ್ಷೆಯಲ್ಲಿ ಬಹಿರಂಗ

ಲಂಡನ್ : ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲ. ದೇಶದಲ್ಲಿ ಮಹಿಳೆಯರಿಗೆ ಅಪಾಯವಿದೆ ಎಂದು ಅಧ್ಯಯನವೊಂದು ವರದಿ ಮಾಡಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಭಾರತದಲ್ಲಿ ನಡೆಯುವ ಲೈಂಗಿಕ ದೌರ್ಜನ್ಯಗಳು  ಅಫ್ಘಾನ್‌ ಹಾಗೂ ಸಿರಿಯಾ ಯುದ್ಧಕ್ಕಿಂತಲೂ ಭೀಕರವಾಗಿರುತ್ತದೆ ಎಂದು ವರದಿ ಮಾಡಿದೆ. ಅಷ್ಟೇ ಅಲ್ಲದೆ, ಲೈಂಗಿಕ ಹಿಂಸೆ, ದೌರ್ಜನ್ಯ, ಕಿರುಕುಳ ಹೆಚ್ಚಿದ್ದು, ಮಹಿಳೆಯರು ಸ್ವತಂತ್ರವಾಗಿರಲು ಭಯಪಡುವಂತಹ ಸ್ಥಿತಿ ಏರ್ಪಟ್ಟಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಥಾಮ್ಸನ್ ರಾಯಿಟರ್ಸ್‌ ಫೌಂಡೇಶನ್‌ನ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗವಾಗಿದೆ. ಮಾರ್ಚ್‌ 26ರಿಂದ ಮೇ 4ರವರೆಗೆ 548 ಮಂದಿ ತಜ್ಞರು ಜಗತ್ತಿನಾದ್ಯಂತ ಸಮೀಕ್ಷೆ ನಡೆಸಿದ್ದರು, ಈ ಸಮೀಕ್ಷೆಯಲ್ಲಿ ವಿಶ್ವದ ಎರಡನೇ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಭಾರತದ ಮಹಿಳೆಯರು ಅಪಾಯದಲ್ಲಿದ್ದಾರೆ ಎಂದು ತಿಳಿದುಬಂದಿದೆ.

2011ರಲ್ಲಿ ನಡೆಸಿದ ಸಮೀಕ್ಷೆ ಈ ಬಾರಿಯೂ ಪುನರಾವರ್ತನೆಯಾಗಿದ್ದು, ಆಗ ಅಫ್ಘಾನಿಸ್ತಾನ, ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋ, ಪಾಕಿಸ್ತಾನ, ಇಂಡಿಯಾ, ಸೋಮಾಲಿಯಾ ದೇಶಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ತಿಳಿದುಬಂದಿತ್ತು. ಆದರೆ ಈ ವರ್ಷ ಭಾರತ ಮಹಿಳೆಯರಿಗೆ ಅತಿ ಹೆಚ್ಚು ಅಪಾಯಕಾರಿ ರಾಷ್ಟ್ರ ಎಂದು ತಿಳಿದುಬಂದಿದೆ.

ಭಾರತದಲ್ಲಿ ಮಹಿಳೆಯರನ್ನು ಕೀಳಾಗಿ ಕಾಣಲಾಗುತ್ತಿದೆ. ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಹೆಣ್ಣು ಮಕ್ಕಳ ಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಿದ್ದು, ವಿಶ್ವದ ಅಭಿವೃದ್ಧಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲು ಸಜ್ಜಾಗುತ್ತಿರುವ ರಾಷ್ಟ್ರದಲ್ಲಿ ಇಂತಹ ಬೆಳವಣಿಗೆ ನಡೆಯುತ್ತಿರುವುದು ಅಪಾಯಕಾರಿ ಎಂದು ಕರ್ನಾಟಕದ ರಾಜ್ಯ ಅಧಿಕಾರಿ ಮಂಜುನಾಥ್‌ ಗಂಗಾಧರ್ ತಿಳಿಸಿದ್ದಾರೆ.

2012ರಲ್ಲಿ ದೆಹಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ದ ಬಳಿಕ ಎಷ್ಟೇ ಕ್ರಮ ಕೈಗೊಂಡರೂ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೇಟಿ ಬಚಾವೋ, ಬೇಟಿ ಪಡಾವೋ ನಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದೂ ಹೇಳಲಾಗಿದೆ.

ರಾಯಿಟರ್ಸ್‌ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಹೆಣ್ಣುಮಕ್ಕಳಿಗೆ ಹೆಚ್ಚಿನ ಅಪಾಯವಿರುವ ಪ್ರಮುಖ ರಾಷ್ಟ್ರಗಳ ಪಟ್ಟಿ ಇಲ್ಲಿದೆ…

2011ರ ರ್ಯಾಂಕಿಂಗ್‌ ಪ್ರಕಾರ                                                        2018ರ ರ್ಯಾಂಕಿಂಗ್ ಪ್ರಕಾರ

ಅಫ್ಘಾನಿಸ್ತಾನ                                                                                           ಭಾರತ

ಕಾಂಗೋ                                                                                                 ಅಫ್ಘಾನಿಸ್ತಾನ

ಪಾಕಿಸ್ತಾನ                                                                                                ಸಿರಿಯಾ

ಭಾರತ                                                                                                     ಸೋಮಾಲಿಯಾ

ಸೋಮಾಲಿಯಾ                                                                                        ಸೌದಿ ಅರೇಬಿಯಾ

 

Leave a Reply

Your email address will not be published.

Social Media Auto Publish Powered By : XYZScripts.com