‘ರೆಕಾರ್ಡಿಂಗ್ ಸೂಪರ್ ಸ್ಟಾರ್’ ಗೌಹರ್ ಜಾನ್ 145ನೇ ಜನ್ಮದಿನ : ಗೂಗಲ್ ಡೂಡಲ್ ಗೌರವ

ಭಾರತದ ಮೊದಲ ‘ರೆಕಾರ್ಡಿಂಗ್ ಸೂಪರ್ ಸ್ಟಾರ್’ ಎಂದೇ ಖ್ಯಾತರಾಗಿದ್ದ ಗೌಹರ್ ಜಾನ್ ಅವರ 145ನೇ ಜನ್ಮದಿನದ ಅಂಗವಾಗಿ ಗೂಗಲ್ ಡೂಡಲ್ ಗೌರವ ನೀಡಿದೆ. 1893 ಜೂನ್ 26ರಂದು ಜನಿಸಿದ್ದ ಗೌಹರ್ ಜಾನ್ ಅವರ ಮೊದಲ ಹೆಸರು ಏಂಜಲಿನಾ ಯೋವಾರ್ಡ್ ಎಂದಾಗಿತ್ತು. ತಾವು ಹಾಡಿದ ಹಾಡುಗಳನ್ನು ರೆಕಾರ್ಡಿಂಗ್ ಮಾಡಿಸಿದ್ದ ಭಾರತದ ಪ್ರಥಮ ಗಾಯಕಿ ಎಂಬ ಹೆಗ್ಗಳಿಕೆ ಗೌಹರ್ ಜಾನ್ ಅವರದ್ದಾಗಿದೆ.

Image result for gauhar jaan doodle

ಬಾಲ್ಯದಲ್ಲಿ ಗೌಹರ್ ಜಾನ್ ಲೈಂಗಿಕ ಶೋಷಣೆಗೆ ಗುರಿಯಾಗಿದ್ದರು. 13ನೇ ವಯಸ್ಸಿನಲ್ಲಿದ್ದಾಗ ಅವರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಈ ಘಟನೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ಗೌಹರ್ ಅವರದ್ದು ಸಂಘರ್ಷಮಯ ಜೀವನವಾಗಿತ್ತು. ಸತತ ಪರಿಶ್ರಮದಿಂದ ಸಾಧನೆಗೈದ ಗೌಹರ್, ಭಾರತೀಯ ಸಂಗೀತ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ಅಜರಾಮರವಾಗಿಸಿದರು.

Related image

ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಠುಮ್ರಿ, ಭಜನ್ ಗಳನ್ನು ಹಾಡಿದ್ದ ಅವರು 600ಕ್ಕೂ ಹಾಡುಗಳನ್ನು ರೆಕಾರ್ಡ್ ಮಾಡಿದ್ದರು. ಬಂಗಾಳಿ, ಗುಜರಾತಿ, ತಮಿಳು, ಅರಬ್ಬೀ, ಫಾರಸೀ, ಪಾಶ್ತೊ, ಇಂಗ್ಲೀಷ್ ಹೀಗೆ ನಾನಾ ಭಾಷೆಗಳಲ್ಲಿ ಅವರು ಹಾಡಿದ ಗೀತೆಗಳ 600 ಡಿಸ್ಕ್ ಗಳನ್ನು ‘ಗ್ರಾಮಾಫೋನ್ ಕಂಪನಿ ಆಫ್ ಇಂಡಿಯಾ’ ಬಿಡುಗಡೆ ಮಾಡಿತ್ತು.

Image result for gauhar jaan doodle

ಗೌಹರ್ ಅವರ ಜೀವನ 19ನೇ ಶತಮಾನದ ಆದಿಭಾಗದಲ್ಲಿ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದ ಮಹಿಳೆಯರ ಪ್ರತೀಕದಂತಿದೆ. ಅವರ ಜೀವನದ ಬಗ್ಗೆ ಹಲವು ವರ್ಷಗಳವರೆಗೆ ಅಧ್ಯಯನ ಮಾಡಿದ ಲೇಖಕ ವಿಕ್ರಮ್ ಸಂಪತ್ ‘ ಮೈ ನೇಮ್ ಈಸ್ ಗೌಹರ್ ಜಾನ್ ‘ ಎಂಬ ಕೃತಿಯನ್ನು ರಚಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com