ಮಧ್ಯಪ್ರದೇಶ : ಮನೆ ಮುಂದೆ ಬೈಕ್ ಚಲಾಯಿಸಿದ್ದಕ್ಕೆ ದಲಿತನ ಮೇಲೆ ಸರಪಂಚ್‍ನಿಂದ ಹಲ್ಲೆ..!

ಗ್ರಾಮದ ಸರಪಂಚ್ ಮನೆಯ ಬಳಿ ಬೈಕ್ ಓಡಿಸಿದರೆಂಬ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಧ್ಯಪ್ರದೇಶದ ತಿಕಮಗಢ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮನೆಯ ಬಳಿ ಬೈಕ್ ಚಲಾಯಿಸಿದ್ದಕ್ಕೆ ಕುಪಿತನಾದ ಗ್ರಾಮದ ಮುಖ್ಯಸ್ಥ, ನಾಲ್ವರೊಂದಿಗೆ ಸೇರಿಕೊಂಡು 30 ವರ್ಷದ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ.

Image result for dalit beaten sarpanch house

ರಾಜಧಾನಿ ಭೋಪಾಲ್ ನಗರದಿಂದ 260 ಕಿಲೋ ಮೀಟರ್ ದೂರವಿರುವ ಹಳ್ಳಿಯಲ್ಲಿ ಜೂನ್ 21ರಂದು ಈ ಘಟನೆ ನಡೆದಿದ್ದು, ದಲಿತನನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿ ದಯಾರಾಮ್ ಅಹಿರ್ವಾರ್, ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ದೂರು ದಾಖಲಿಸಿಕೊಂಡ ಪೋಲೀಸರು ಆರೋಪಿಗಳಾದ ಗ್ರಾಮದ ಸರಪಂಚ್, ಆತನ ಸೋದದರು ಹಾಗೂ ನೆರೆಯವರನ್ನು ಎಸ್ ಟಿ ಎಸ್ ಸಿ ಆ್ಯಕ್ಟ್ ಅಡಿಯಲ್ಲಿ ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com