ಏಕದಿನ ಮಾದರಿಯಲ್ಲಿ ಜೋಸ್ ಬಟ್ಲರ್ ಧೋನಿಗಿಂತ ಉತ್ತಮ ಪ್ಲೇಯರ್ : ಟಿಮ್ ಪೇಯ್ನ್

‘ ಏಕದಿನ ಮಾದರಿಯಲ್ಲಿ ಧೋನಿಗಿಂತ ಜೋಸ್ ಬಟ್ಲರ್ ಉತ್ತಮ ಆಟಗಾರ, ಬಟ್ಲರ್ ಸದ್ಯ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿದ್ದಾರೆ ‘ ಎಂದು ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಟಿಮ್ ಪೇಯ್ನ್ ಅಭಿಪ್ರಾಯಪಟ್ಟಿದ್ದಾರೆ.

‘ ಜೋಸ್ ಬಟ್ಲರ್ ತುಂಬ ಒಳ್ಳೆಯ ಆಟಗಾರ, ಅಂತರಾಷ್ಟ್ರೀಯ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ಸದ್ಯಕ್ಕೆ ಜೋಸ್ ಬಟ್ಲರ್ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿದ್ದಾರೆ, ಬಟ್ಲರ್ ಅವರನ್ನು ಚಾಲೆಂಜ್ ಮಾಡುವಂತಹ ಆಟಗಾರರು ತುಂಬ ಜನ ಇಲ್ಲ, ಧೋನಿ ಕೂಡ ಒಳ್ಳೆಯ ಆಟಗಾರ, ಆದರೆ ಈ ಸಮಯಕ್ಕೆ ಬಟ್ಲರ್ ತಮ್ಮ ಫಾರ್ಮ್ ನ ಶಿಖರದ ಉತ್ತುಂಗದಲ್ಲಿದ್ದಾರೆ ‘

‘ ಏಕದಿನ ಮಾದರಿಯ ಕ್ರಿಕೆಟ್ ಅನ್ನು ಜೋಸ್ ಬಟ್ಲರ್ ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ಸಾಮರ್ಥ್ಯದ ಸಂಪೂರ್ಣ ಒಳಹೊರಗನ್ನು ಅರಿತಿದ್ದಾರೆ ‘ ಎಂದು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಟಿಮ್ ಪೇಯ್ನ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com