ಗಂಡನಿಂದ ಬೇರೆಯಾಗಿದ್ದ ಬ್ಯೂಟಿಷಿಯನ್ ಸಾವು : ಮಹಿಳೆ ಸಾವಿನ ಸುತ್ತ ಅನುಮಾನಗಳ ಹುತ್ತ

ಮೈಸೂರು : ಗಂಡನಿಂದ ಬೇರೆಯಾಗಿ ಬ್ಯೂಟಿಷಿಯನ್ ಕೆಲಸ ಮಾಡುತ್ತಿದ್ದ ಮಹಿಳೆ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ದಾಮೋದರ ಬಡಾವಣೆಯಲ್ಲಿ ನಡೆದಿದೆ.

25 ವರ್ಷದ ರಮ್ಯಾ  ಮೃತಪಟ್ಟ ಯುವತಿ. ಚನ್ನರಾಯಪಟ್ಟಣದ ಜನ್ನಿವಾರ ಗ್ರಾಮದ ನಿವಾಸಿಯಾಗಿದ್ದ ರಮ್ಯಾ ಕಳೆದ 6 ವರ್ಷದ ಹಿಂದೆ ಮೈಸೂರಿನ ಆನಂದ್ ಎಂಬುವರನ್ನು ವಿವಾಹವಾಗಿದ್ದರು. ನಂತರ ಕಳೆದ 2 ವರ್ಷದ ಹಿಂದೆ ಆನಂದ್ ನಿಂದ ಬೇರೆಯಾಗಿ ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಈ ನಡುವೆ ಗಂಡನಿಂದ ಬೇರೆಯಾಗಿದ್ದ ರಮ್ಯ ಸುನೀಲ್ ಎಂಬುವವನ ಜತೆ ಇದ್ದರು ಎಂದು ತಿಳಿದುಬಂದಿದೆ. ಇದೀಗ ದಾಮೋದರ ಬಡಾವಣೆಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದೆ. ಸುನೀಲ್ ಕೊಲೆ ಮಾಡಿದ್ದಾನೆಂಬ ಶಂಕೆ ವ್ಯಕ್ತವಾಗಿದ್ದು, ರಮ್ಯಾ ಪೋಷಕರು ಈ ಬಗ್ಗೆ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧ  ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com