ರೈತರಿಗೆ ಒಳಿತಾಗುವುದಾದರೆ ನನ್ನ ಸ್ವಂತ ಕಾರನ್ನೂ ಬಿಡಲು ಸಿದ್ಧ ಎಂದ ಜಮೀರ್ ಅಹಮದ್ !

ಬೆಂಗಳೂರು : ಸರ್ಕಾರದ ಮೇಲೆ  ರೈತರ ಸಾಲಮನ್ನಾದ ಜವಾಬ್ದಾರಿಯಿದ್ದು, ಇದಕ್ಕಾಗಿ ಕಾರನ್ನು ಬಿಡಲು ಸಿದ್ಧ ಎಂದು ಸಚಿವ ಜಮೀರ್ ಅಹಮದ್‌ ಹೇಳಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯನವರ ಫಾರ್ಚೂನರ್‌ ಕಾರೇ ಬೇಕು ಎಂದು ಜಮೀರ್ ಪಟ್ಟು ಹಿಡಿದಿದ್ದರು. ಆದರೆ ಈಗ ತಮ್ಮ ಬೇಡಿಕೆಯನ್ನು ಹಿಂತೆಗೆದುಕೊಂಡಿದ್ದು, ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ರೈತರ ಸಾಲಮನ್ನಾ ಮಾಡುವುದೇ ಪ್ರಮುಖ ವಿಚಾರವಾಗಿದೆ. ಸಾಲಮನ್ನಾ ಮಾಡುತ್ತಿರುವುದರಿಂದ ಬೇರೆ ಇಲಾಖೆಗಳಿಗೆ ಹಣಕಾಸಿನ ಕೊರತೆಯಾಗುತ್ತದೆ. ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲ. ಆದ್ದರಿಂದ ನಮ್ಮ ನಮ್ಮ ಇಲಾಖೆಗಳಿಗೆ ಹೆಚ್ಚಿನ ಹಣ ನಿರೀಕ್ಷೆ ಮಾಡಬಾರದು ಎಂದಿದ್ದಾರೆ.

ರೈತರ ಸಾಲಮನ್ನಾ ಮಾಡುವ ವಿಚಾರ ಇದ್ದುದರಿಂದಲೇ ಬಳಕೆ ಮಾಡಿರುವ ಕಾರನ್ನು ನೀಡಿ ಹೊಸ ಕಾರು ಬೇಡ ಎಂದಿದ್ದೆ. ನಾನೇನು ಬೆಂಝ್‌ ಕಾರೇ ಬೇಕು ಎಂದು ಕೇಳಿರಲಿಲ್ಲ. ರೈತರಿಗೆ ಒಳ್ಳೆಯದಾಗುವುದಾದರೆ ಈಗಿರುವ ಕಾರನ್ನು ಬಿಡಲು ಸಿದ್ಧ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com