ಕಗ್ಗಂಟಾದ ಬಜೆಟ್ ಮಂಡನೆ : ಸಾಲಮನ್ನಾ ಆಗುತ್ತೇ ಅನ್ನೋದೇ ಡೌಟು…?!

ಬೆಂಗಳೂರು :  ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುತ್ತಾರೋ ಇಲ್ಲವೋ ಎಂಬುದೇ ಇನ್ನೂ ಅನುಮಾನವಾಗಿದೆ. ಒಂದೆಡೆ ತನ್ನ ಪಕ್ಷದವರೇ ಲೋಕಸಭೆ ಮುಗಿದ ಬಳಿಕ ಬಜೆಟ್ ಮಂಡನೆ ಮಾಡಿ ಎನ್ನುತ್ತಿದ್ದು, ಇನ್ನು ಕೆಲವರು ಬಜೆಟ್ ಮಂಡನೆ ಮಾಡುವುದೇ ಬೇಡ ಎನ್ನುತ್ತಿದ್ದಾರೆ.

ಈಗಾಗಲೆ ಸಹಕಾರಿ ಬ್ಯಾಂಕ್‌ಗಳಲ್ಲಿನ  8 ಸಾವಿರ ಕೋಟಿ ರೂ ಸಾಲ ಮನ್ನಾ ಆಗಿದ್ದು, ಇನ್ೂ 10 ಸಾವಿರ ಕೋಟಿ ಸಾಲಮನ್ನಾ ಆಗಬೇಕಿದೆ. ಈ ಬಾರಿ ಸರ್ಕಾರಿ ನೌಕರರ ಸಂಬಳವೂ ಹೆಚ್ಚಿಸಿರುವ ಹಿನ್ನೆಲೆಯಲ್ಲಿ  ಸಾಲಮನ್ನಾ ಕಷ್ಟ ಎಂದು ಹೇಳಲಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಕೆಲವರು ಹಿಂದಿನ ಬಜೆಟ್ ಮುಂದುವರಿಸಿ ಎನ್ನುತ್ತಿದ್ದಾರೆ. ಆದರೆ ನಾನು ಯಾರ ಹಂಗಿನಲ್ಲೂ ಇಲ್ಲ. ಕಳೆದ ಬಾರಿ ಬಜೆಟ್‌ಗೆ ಒಪ್ಪಿಗೆ ಸೂಚಿಸಿದ ಸುಮಾರು 100 ಮಂದಿ ಶಾಸಕರು ಈ ಬಾರಿ ಆಯ್ಕೆಯಾಗಿಲ್ಲ. ಈ ಬಾರಿ 100 ಮಂದಿ ಹೊಸ ಶಾಸಕರು ಆಯ್ಕೆಯಾಗಿದ್ದಾರೆ. ಒಂದು ವೇಳೆ ನಾನು ಹೊಸದಾಗಿ ಬಜೆಟ್‌ ಮಂಡನೆ ಮಾಡದೇ ಹೊದರೆ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ. ಹಾಗೆ ಮಾಡಿದರೆ ನಾನೇನು ಮಾಡಲಿ ಎಂದು ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಈ ಮಧ್ಯೆ ಬಜೆಟ್ ಮಂಡನೆ ವಿಚಾರವಾಗಿ ಒಬ್ಬೊಬ್ಬ ನಾಯಕರು ಒಂದೊಂದು ಮಾತನಾಡುತ್ತಿರುವುದು ಎಚ್‌ಡಿಕೆಗೆ ತಲೆ ನೋವಾಗಿ ಪರಿಣಮಿಸಿದ್ದು,  ಜುಲೈ 5 ರಂದು ಬಜೆಟ್ ಮಂಡನೆ ಮಾಡುತ್ತಾರಾ ಇಲ್ಲವಾ ಎಂಬುದೇ ಇನ್ನೂ  ಪ್ರಶ್ನೆಯಾಗಿ ಉಳಿದಿದೆ. ಅಲ್ಲದೆ ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸಾಲಮನ್ನಾ ಆಗುವುದು ಸಂಶಯ ಎಂದು ಹೇಳಲಾಗುತ್ತಿದೆ. ಆದರೆ ಎಲ್ಲಾ ನಿರ್ಧಾರ ಕುಮಾರಸ್ವಾಮಿಯವರ ಮೇಲೆ ಅವಲಂಬಿತವಾಗಿದ್ದು, ಸಾಲಮನ್ನಾ ಮಾಡುತ್ತಾರೆ ಎಂಬ ಭರವಸೆಯಲ್ಲೇ ರೈತರು ಕಾಯುತ್ತಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com