FIFA 2018 : ಅರ್ಜೆಂಟೀನಾಗೆ ‘ಮಾಡು ಇಲ್ಲವೆ ಮಡಿ’ ಪಂದ್ಯ : ನಡೆಯುವುದೇ ‘ಮೆಸ್ಸಿ ಮ್ಯಾಜಿಕ್’..?

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಕ್ರೀಡಾಂಗಣದಲ್ಲಿ ಮಂಗಳವಾರ ಅರ್ಜೆಂಟೀನಾ ಹಾಗೂ ನೈಜೀರಿಯಾ ತಂಡಗಳ ನಡುವೆ ‘ಡಿ’ ಗುಂಪಿನ ಲೀಗ್ ಪಂದ್ಯ ನಡೆಯಲಿದೆ. ವಿಶ್ವಕಪ್ ಟ್ರೋಫಿ ಜಯಿಸುವ ಅರ್ಜೆಂಟೀನಾ ಕನಸು ಜೀವಂತವಾಗಿ ಉಳಿಯಬೇಕಾದರೆ ನೈಜೀರಿಯಾ ವಿರುದ್ಧದ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಹಾಗಾಗಿ ಅರ್ಜೆಂಟೀನಾ ಹಾಗೂ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಪಾಲಿಗೆ ಇಂದಿನ ಮ್ಯಾಚ್ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.

ಐಸ್ಲ್ಯಾಂಡ್ ಹಾಗೂ ಅರ್ಜೆಂಟೀನಾ ನಡುವಿನ ಮೊದಲ ಲೀಗ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಅನಂತರ ಕ್ರೊವೇಶಿಯಾ ಎದುರು ಅರ್ಜೆಂಟೀನಾ 3-0 ಯಿಂದ ಹೀನಾಯ ಸೋಲು ಅನುಭವಿಸಿ ಗ್ರೂಪ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿದೆ. ಟೂರ್ನಿಯಲ್ಲಿ ಇದುವರೆಗೆ ಕಾಣದ ‘ಮೆಸ್ಸಿ ಮ್ಯಾಜಿಕ್’ ಇಂದಿನ ಪಂದ್ಯದಲ್ಲಿ ಕಾಣುಬಹುದೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

‘ಡಿ’ ಗ್ರೂಪ್ ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅರ್ಜೆಂಟೀನಾ ಪುಟಿದೇಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.30ಕ್ಕೆ ಆರಂಭವಾಗಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com