ಮೋದಿಗೆ ಸಾಥ್ ನೀಡಿದ ಮುಸ್ಲೀಮರು : ಲೋಕಸಭೆ ಚುನಾವಣೆಲಿ ಪ್ರಧಾನಿಯೇ ಗೆಲ್ಲಬೇಕಂತೆ…ಯಾಕೆ ?

ಲಖನೌ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯೇ ಗೆಲ್ಲಬೇಕು ಎಂದು ಮುಸ್ಲೀಮರು ನಿರ್ಧರಿಸಿದ್ದು, ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಉತ್ತರ ಪ್ರದೇಶ ಬಿಜೆಪಿ ಬೆಂಬಲಿತ ಪರಿಷತ್ ಸದಸ್ಯ, ಆರ್‌ಎಸ್‌ಎಸ್‌ ಮುಖ್ಯಸ್ಥ ಬುಕ್ಕಲ್‌ ನವಾಜ್‌, ಮುಂದಿನ  ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಬೆಂಬಲಿಸುವುದರ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಪರ ನಿಲ್ಲುವುದಾಗಿ ಹೇಳಿದ್ದಾರೆ. ಜೊತೆಗೆ ನಾವೆಲ್ಲರೂ ಮೋದಿಯವರಿಗೆ ಸಾಥ್ ನೀಡುತ್ತೇವೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಬೇಕು ಎಂಬುದೇ ನಮ್ಮ ಬಯಕೆ. ಶಿಯಾ ಮುಸ್ಲೀಮರ ಬಗ್ಗೆ ಬಿಜೆಪಿ ಕಾಳಜಿ ಹೊಂದಿದೆ. ಅದಕ್ಕಾಗಿ ನಾವು ಅವರನ್ನು ಬೆಂಬಲಿಸುತ್ತಿರುವುದಾಗಿ ಹೇಳಿದ್ದಾರೆ.

ಬಿಜೆಪಿ ಶಿಯಾ ಸಮುದಾಯದ ಮುಖಂಡರಾದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ರಾಜ್ಯ ಸಚಿವ ಮೊಹ್ಸಿನ್ ರಾಜಾ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಹಸನ್ ರಿಜ್ವಿ, ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹೈದರ್ ಅಬ್ಬಾಸ್ ಅವರಿಗೆ ಗೌರವಯುತ ಸ್ಥಾನಗಳನ್ನು ನೀಡಿದೆ ಎಂದು ನವಾಜ್ ಹೇಳಿದ್ದಾರೆ.

Leave a Reply

Your email address will not be published.