2.5 ಅಡಿ ವರ, 2 ಅಡಿ ವಧು : ಅಪರೂಪರ ಕುಬ್ಜ ಜೋಡಿಯ ಮದುವೆಗೆ ಸಾಕ್ಷಿಯಾಯ್ತು ಕೋಲಾರ

ಕೋಲಾರ :  ಅಪರೂಪದ ಕುಬ್ಜರ ಮದುವೆಗೆ ಕೋಲಾರ ಸಾಕ್ಷಿಯಾಗಿದೆ. ಯಶವಂತಪುರದ ಅನಿಲ್ ಕುಮಾರ್ ಹಾಗೂ ಬೆಂಗಳೂರಿನ ವಿಜಯಪುರದ ವರಲಕ್ಷ್ಮೀ ಅಪರೂಪದ ಈ ಕುಬ್ಜ ಜೋಡಿ ಸೋಮವಾರ ಹಸೆಮಣೆ ಏರಿದ್ದಾರೆ.

ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬುದಕ್ಕೆ ಈ ಜೋಡಿಯೇ ಸಾಕ್ಷಿ. ಕೋಲಾರದ   ಜಡಗೇನಹಳ್ಳಿ ಪುರಾಣ ಪ್ರಸಿದ್ದ ಕಾಲಭೈರವೇಶ್ವರ ದೇವಾಲಯದಲ್ಲಿ ಮದುವೆ ಶಾಸ್ತ್ರ ನೆರೆವೇರಿತ್ತು.

2.5 ಅಡಿ ಎತ್ತರದ ಅನಿಲ್ ಕುಮಾರ್ ಬೆಂಗಳೂರಿನ ಖಾಸಗೀ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು,  2 ಅಡಿ ಎತ್ತರದ ವರಲಕ್ಷ್ಮಿಯವರನ್ನು ಮದುವೆಯಾಗಿದ್ದಾರೆ. ಈ ಅಪರೂಪ ಜೋಡಿಯಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

 

2 thoughts on “2.5 ಅಡಿ ವರ, 2 ಅಡಿ ವಧು : ಅಪರೂಪರ ಕುಬ್ಜ ಜೋಡಿಯ ಮದುವೆಗೆ ಸಾಕ್ಷಿಯಾಯ್ತು ಕೋಲಾರ

Leave a Reply

Your email address will not be published.

Social Media Auto Publish Powered By : XYZScripts.com