ಬುರ್ಕಾ ಹಾಕಿಕೊಂಡು ಮಂಗಳಮುಖಿಯಂತೆ ನಟಿಸಲು ಹೋದ ಬಾಲಕರು…ಕೊನೆಗೆ ಆಗಿದ್ದೇನು ?

ತುಮಕೂರು : ಇಬ್ಬರು ಬಾಲಕರು ತಮಾಷೆಗಾಗಿ ಬುರ್ಕಾ ಧರಿಸಿ, ಅನುಮಾನಾಸ್ಪದವಾಗಿ ಸುತ್ತಾಡಿ ಸಾರ್ವಜನಿಕರಿಂದ ಗೂಸಾ ತಿಂದ ಘಟನೆ ನಡೆದಿದೆ.

ಕುಣಿಗಲ್ ಪಟ್ಟಣದ ವಾರ್ಡ ನಂಬರ್ 2 ರಲ್ಲಿ ಬಾಲಕರ ಘಟನೆ ನಡೆದಿದೆ. ಬುರ್ಕಾ ಹಾಕಿಕೊಂಡು ಮಂಗಳ ಮುಖಿಯಂತೆ ನಟಿಸಲು ಆರಂಭಿಸಿದ ಇಬ್ಬರೂ ಬಾಲಕರು ಬೀದಿ ಬೀದಿ ಸುತ್ತಿದ್ದಾರೆ. ಬುರ್ಕಾಧಾರಿಗಳ ಬಗ್ಗೆ ಅನುಮಾನಗೊಂಡ ಸ್ಥಳೀಯರು ಬುರ್ಕಾ ತೆಗೆದು ಬಾಲಕರ ಮುಖ ನೋಡಿದ್ದಾರೆ. ಬುರ್ಕಾಧರಿಸಿ ವಂಚಿಸುತ್ತಿದ್ದೀರಾ ಎಂದು ಪ್ರಶ್ನಿಸಿದ ಸ್ಥಳೀಯರು ಇಬ್ಬರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಬ್ಬರೂ ಬಾಲಕರು ಕುಣಿಗಲ್ ಪಟ್ಟಣದವರೇ ಆಗಿದ್ದು ತಾವು ಮಂಗಳ ಮುಖಿಯರಂತೆ ನಟನೆ ಮಾಡಲು ಹೋಗಿ ಬುರ್ಕಾ ಧರಿಸಿದ್ದೇವೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದು, ಸಾರ್ವಜನಿಕ ರಿಂದ ಥಳಿತಕ್ಕೊಳಗಾಗಿರುವ ಯುವಕರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

One thought on “ಬುರ್ಕಾ ಹಾಕಿಕೊಂಡು ಮಂಗಳಮುಖಿಯಂತೆ ನಟಿಸಲು ಹೋದ ಬಾಲಕರು…ಕೊನೆಗೆ ಆಗಿದ್ದೇನು ?

  • June 25, 2018 at 5:08 PM
    Permalink

    ತಮಾಷೆ , ಅಧಿಕ ಪ್ರಸಂಗ ಹಾಗೂ ಇನ್ನೊಬ್ಬರ ತಾಳ್ಮೆ ಪರೀಕ್ಷೆ ಮಾಡುವಂತೆ ಇರಬಾರದು , ಅದು ಅತೀ ಆದರೆ ಇಂತಹ ಘಟನೆಗಳು ನಡೆಯುವುದಂತು ಗ್ಯಾರಂಟಿ .. ಒಳ್ಳೆಯ ಸುದ್ದಿ , ಇನ್ನಾದರು ಇಂತಹ ಕೆಲಸಕ್ಕೆ ಯುವಕರು ಮುಂದಾಗದೆ ಇದ್ದರೆ ಒಳಿತು. ಒಳ್ಳೆಯ Kannada News ತಾಣ. ಧನ್ಯವಾದ

    Reply

Leave a Reply

Your email address will not be published.