ಪಿಗ್ಗಿ ಮನೆಗೆ ಅಳಿಯನಾಗಿ ಎಂಟ್ರಿ ಕೊಡ್ತಾರಾ ನಿಕ್‌ : ಈ ಬಗ್ಗೆ ಪ್ರಿಯಾಂಕಾ ತಾಯಿ ಹೇಳಿದ್ದೇನು ?

ಇತ್ತೀ ಚೆಗಷ್ಟೇ ನಟಿ ಪ್ರಿಯಾಂಕಾ ಛೋಪ್ರಾ ಅಮೆರಿಕದ ಖ್ಯಾತ ಗಾಯಕ ನಿಕ್ ಜೋನಸ್‌ ಜೊತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರನ್ನು ನೋಡಿದವರು, ಇಬ್ಬರೂ ಪ್ರೀತಿಸುತ್ತಿದ್ದಾರೆ. ತಾಯಿಗೆ ಪರಿಚಯ ಮಾಡಿಕೊಡಲು ನಿಕ್‌ರನ್ನು ಪಿಗ್ಗಿ ಭಾರತಕ್ಕೆ ಕರೆತಂದಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಪ್ರಿಯಾಂಕಾ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಈ ಬಗ್ಗೆ ಪ್ರಿಯಾಂಕಾ ತಾಯಿ ಬಾಯ್ಬಿಟ್ಟಿದ್ದಾರೆ.

ನಿಕ್‌ ಹಾಗೂ ಪ್ರಿಯಾಂಕಾ ಅವರ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪಿಗ್ಗಿ ತಾಯಿ ಮಧು, ನಾವು ಊಟಕ್ಕೆ ತೆರಳಿದ್ದಾಗ ನಮ್ಮ ಜತೆ ನಿಕ್ ಕೂಡ ಇದ್ದರು. ಆದರೆ ಅವರನ್ನು ಬಿಟ್ಟು ಇನ್ನೂ ಹತ್ತಾರು ಮಂದಿ ಹಾಜರಿದ್ದರು. ನಿಕ್ ಜತೆ ಅಷ್ಟಾಗಿ ಮಾತನಾಡಲು ಸಾಧ್ಯವಾಗಿಲ್ಲ. ನಾನು ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದ್ದೇನೆ. ಈಗಲೇ ನಿಕ್ ಬಗ್ಗೆ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ. ಅವರ ಬಳಿ ಮತ್ತಷ್ಟು ಮಾತನಾಡಬೇಕು ಎಂದಿದ್ದಾರೆ.

ನಿಕ್‌-ಪ್ರಿಯಾಂಕಾ ಮುಂಬೈಗೆ ಆಗಮಿಸಿದ್ದ ವೇಳೆ ಕೈ ಕೈ ಹಿಡಿದುಕೊಂಡು ತಿರುಗಾಡಿದ್ದರು. ಅಲ್ಲದೆ ಇಬ್ಬರೂ ಒಂದೇ ರೀತಿಯ ಉಂಗುರ ತೊಟ್ಟಿದ್ದರು. ಈ ಫೋಟೋ ಎಲ್ಲೆಡೆ ವೈರಲ್ಲಾಗಿದ್ದು, ನಿಕ್‌ ಪಿಗ್ಗಿ ಕೈ ಹಿಡಿಯುತ್ತಾರಾ ಎಂಬುದು ಸದ್ಯದಲ್ಲೇ ತಿಳಿಯಲಿದೆ.

 

Leave a Reply

Your email address will not be published.