ಜನರ ಮನಸ್ಸಿಂದ ಇನ್ನೂ ದೂರವಾಗಿಲ್ಲ ಮಾಜಿ ಸಿಎಂ : ಸಿದ್ದರಾಮಯ್ಯರನ್ನು ಕಡೆಗಣಿಸಬೇಡಿ ಎಂದು ಕಾರ್ಯಕರ್ತರ ಮನವಿ

ಮಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಮಾಡಿದ್ದಾರೆ. ಅವರ ನಾಯಕತ್ವ ಇದ್ದದ್ದರಿಂದಲೇ ಕಾಂಗ್ರೆಸ್‌ ಇಷ್ಟು ಸೀಟುಗಳನ್ನು ಗೆಲ್ಲಲು ಸಾಧ್ಯವಾಯ್ತು. ಇಲ್ಲದಿದ್ದರೆ ಅಷ್ಟು ಸೀಟೂ ಬರುತ್ತಿರಲಿಲ್ಲ ಆದ್ದರಿಂದ ಅವರನ್ನು ಕಡೆಗಣಿಸಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಪರಮೇಶ್ವರ್‌ ಅವರಿಗೆ ಸಲಹೆ ನೀಡಿದ್ದಾರೆ.

ಪ್ರಕೃತಿ ಚಿಕಿತ್ಸಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಪರಮೇಶ್ವರ್ ಭೇಟಿಯಾಗಿ ಏರ್‌ಪೋರ್ಟ್‌ಗೆ ಆಗಮಿಸಿದ್ದು, ಈ ವೇಳೆ ಪರಮೇಶ್ವರ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ನೋ ರಿಯಾಕ್ಷನ್, ಈ ರೀತಿ ಮಾಡಬೇಡಿ ಎಂದು ತೆರಳಿದ್ದರು. ಇದಕ್ಕೂ ಮುನ್ನ ಕಾಂಗ್ರೆಸ್‌ ಕಾರ್ಯಕರ್ತರು ಪರಮೇಶ್ವರ್‌ಗೆ ಜೈಕಾರ ಹಾಕಿದ್ದು,  ಪಕ್ಷವನ್ನು ಬಲಿ ಕೊಡಲು ಬಿಡಬೇಡಿ. ಪಕ್ಷ ಉಳಿಸಿ ಬೆಳೆಸೋ ನಿಟ್ಟಿನಲ್ಲಿ ಕೆಲಸ ಮಾಡಿ. ಸಿದ್ದರಾಮಯ್ಯ ಅವರನ್ನು ಎಂದಿಗೂ ಕಡೆಗಣಿಸಬೇಡಿ ಎಂದು ಸಲಹೆ ನೀಡಿರುವುದಾಗಿ ತಿಳಿದುಬಂದಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com