ರಮೇಶ್ ಅರವಿಂದ್‌ ಸಾರಥ್ಯದಲ್ಲಿ ಇಂದಿನಿಂದ ಕನ್ನಡದ ಕೋಟ್ಯಾಧಿಪತಿ ಶುರು…

ಕನ್ನಡದ ಕಿರುತೆರೆಯಲ್ಲಿ ಹೊಸತನಕ್ಕೆ ನಾಂದಿ ಹಾಡಿದ್ದ ಕನ್ನಡದ ಕೋಟ್ಯಾಧಿಪತಿ ಮೂರನೇ ಸೀಸನ್ ಇಂದಿನಿಂದ ಪ್ರಸಾರವಾಗುತ್ತಿದೆ. ಮುಂಚೆಯ ಸೀಸನ್ 1 ಹಾಗೂ ಸೀಸನ್‌ 2ರಲ್ಲಿ ಪವರ್ ಸ್ಟಾರ್ ಪುನೀತ್ ನಿರೂಪಣೆ ಮಾಡುತ್ತಿದ್ದರು, ಆದರೆ ಈ ಸೀಸನ್​​ನನ್ನು ನಟ, ನಿರ್ದೇಶಕ, ನಿರ್ಮಾಪಕ ರಮೇಶ್ ಅರವಿಂದ್ ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ವೀಕೆಂಡ್ ವಿತ್‌ ರಮೇಶ್ ರಿಯಾಲಿಟಿ ಶೋ ಮೂಲಕ ಯಶಸ್ವಿ ನಿರೂಪಕ ಎನ್ನುವ ಪಟ್ಟ ಪಡೆದಿರುವ ರಮೇಶ್ ಅವರ ಸಾರಥ್ಯದಲ್ಲಿ ಈ ಸೀಸನ್ ಮೂಡಿ ಬರಲಿದೆ.

Image result for ಕನ್ನಡದ ಕೋಟ್ಯಾಧಿಪತಿ

ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಸೋಮವಾದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಆಡಿಷನ್​​ಗಳ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಈ ಸೀಸನ್ 65 ಕಂತುಗಳಲ್ಲಿ ಪ್ರಸಾರವಾಗಲಿದೆ. ಇನ್ನು ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಈ ಶೋ ನಡೆಯುತ್ತಿದ್ದು, ಕಳೆದ ಎರಡು ಸೀಸನ್​ ಗಳನ್ನು ಚೆನ್ನೈನಲ್ಲಿ ನಡೆಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com