ದಾವಣಗೆರೆ : ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ ಸಾವು : ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

ದಾವಣಗೆರೆ : ಅನಾರೋಗ್ಯ ದಿಂದ ಬಳಲುತ್ತಿದ್ದ ಸಿಆರ್ ಪಿಎಫ್ ಯೋಧ ಜಗದೀಶ ಎಂ (24) ಸಾವನ್ನಪ್ಪಿದ್ದಾರೆ. ಮೃತ ಜಗದೀಧ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹನಮಲಾಪುರ ಗ್ರಾಮದ ಜೈಪುರ ತಾಂಡಾದ ನಿವಾಸಿಯಾಗಿದ್ದರು.


ಕಳೆದ ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಜಗದೀಶ ನಿನ್ನೆ ರಾತ್ರಿ ಶಿವಮೊಗ್ಗ ದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ ಹೊಂದಿದ್ದಾರೆ. ಕಳೆದ ಐದು ವರ್ಷದಿಂದ ಆಸ್ಸಾಂ ಸಿಆರ್ ಪಿಎಫ್ ನಲ್ಲಿ ಸೇವೆಯಲ್ಲಿದ್ದ. ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಯೋಧನ ಅಂತ್ಯ ಸಂಸ್ಕಾರ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com